ಬೈಂದೂರು: ಬೈಂದೂರು ವ್ಯಾಪ್ತಿಯಲ್ಲಿ  ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಡುವರಿ ಗ್ರಾ.ಪಂ ವ್ಯಾಪ್ತಿಯ ತಾರಾಪತಿ ಶಾಲೆಯ ಮೇಲ್ಚಾವಣೆ ಕುಸಿದು ಬಿದ್ದಿದೆ.ಶಾಲೆಗೆ ರಜೆ ಇರುವ ಕಾರಣ ಯಾವುದೇ ತೊಂದರೆಯಾಗಿಲ್ಲ.

ಅಧಿಕಾರಿಗಳ ನಿರ್ಲಕ್ಷ,ಸಾರ್ವಜನಿಕರ ಆಕ್ರೋಶ: ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ತೆರವುಗೊಳಿಸಬೇಕೆಂದು ಇಂಜಿನಿಯರ್ ವರದಿ ನೀಡಿದರು ಸಹ ಅಧಿಕಾರಿಗಳು ಗಮನ ಹರಿಸಿಲ್ಲ.ಕೆಲವು ಸಮಯದ ಹಿಂದೆ ಈ ಕಟ್ಟಡದಲ್ಲಿ ತರಗತಿ ಮಾಡುತ್ತಿದ್ದು ಅಪಾಯ ಅರಿತ ಸ್ಥಳೀಯರು ಈ ಕಟ್ಟಡದಲ್ಲಿ ತರಗತಿ ನಡೆಸದಂತೆ ಶಿಕ್ಷಕರಿಗೆ ತಿಳಿಸಿದ್ದರು.ಕನ್ನಡ ಮಾದ್ಯಮ ಶಾಲೆಯ ಅಭಿವೃದ್ದಿಗೆ ಸರಕಾರ ಹಲವು ಯೋಜನೆಗಳನ್ನು ನೀಡುವ ಭರವಸೆ ನೀಡಿದರು ಕೂಡ ಅಧಿಕಾರಿಗಳ ನಿರ್ಲಕ್ಷತನದಿಂದ ಇಂತಹ ಘಟನೆಗಳು ನಡೆಯುತ್ತಿರುವುದು ಪಾಲಕರಿಗೆ ಆತಂಕ ಉಂಟು ಮಾಡುತ್ತಿದೆ.ಕುಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಜಾಗೃತೆ ವಹಿಸುವ ಇಚ್ಚಾಶಕ್ತಿ ಅಧಿಕಾರಿಗಳಿಗೆ ಇರಬೇಕು ಮತ್ತು ಘಟನೆ ನಡೆದ ಸ್ಥಳಕ್ಕೆ 11 ಗಂಟೆಯವರೆಗೆ ಯಾವುದೇ ಅಧಿಕಾರಿಗಳು ಬರದಿರುವುದು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ ಎದ್ದು ತೋರುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

News/Giri shiruru

Leave a Reply

Your email address will not be published.

five × 4 =