ಬೈಂದೂರು: ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ (ರಿ.)ಬೈಂದೂರು,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಂಟು ದಿನಗಳ ಕಾಲ 1696ನೇ ಮಧ್ಯವರ್ಜನ ಶಿಬಿರ ನಾಗೂರಿನ ಶ್ರೀಕೃಷ್ಣ ಲಲಿತ ಕಲಾ ಮಂದಿರದಲ್ಲಿ ನೆಡೆಯಿತು.
ಧ.ಗ್ರಾ.ಯೋಜನೆ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ಜನ್ಮದಲ್ಲಿ ಮಾಡಿದ ಪಾಪದಿಂದ ವಿಮುಕ್ತಿ ಹೊಂದಲು ಒಂದು ಒಳ್ಳೆಯ ಅವಕಾಶ ಈ ಮಧ್ಯವರ್ಜನ ಶಿಬಿರದಿಂದ ದೊರಕಿದೆ.ದುಶ್ಚಟಗಳಿಂದ ವ್ಯಕ್ತಿಯ ಬದುಕು ಸರ್ವನಾಶವಾಗುತ್ತದೆ. ನಿಮ್ಮ ಕುಡಿತದ ಕೆಟ್ಟ ಚಟದಿಂದ ಹೆಂಡತಿ, ಮಕ್ಕಳ ಜೀವನ ಕೂಡ ಹಾಳಾಗುತ್ತದೆ. ಪ್ರತಿಯೊಬ್ಬರೂ ಮದ್ಯ ವ್ಯಸನದಿಂದ ಮುಕ್ತಗೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರೊಂದಿಗೆ ಸಮಾಜಮುಖಿಯಾಗಿ ಬೆಳೆಯಬೇಕು ಎಂದರು.
ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಮಧ್ಯವರ್ಜನ ಶಿಬಿರದ ಕುರಿತು ಸಂಕ್ಷಿಪ್ತವಾಗಿ ತಿಳಿಸಿ ಶಿಬಿರದ ಪ್ರಯೋಜನ ಪಡೆಯುವಂತೆ ಶಿಬಿರಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ,ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ,ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸತೀಶ್ ಎಂ ನಾಯಕ್ ನಾಡ, ಮಹಾಬಲೇಶ್ವರ ಆಚಾರ್ಯ,ಕೃಷ್ಣ ಲಲಿತ ಕಲಾಮಂದಿರದ ಮಾಲಕ ರತ್ನಾಕರ ಉಡುಪ, ಕಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಶೆಟ್ಟಿ,ಕಿರಿಮಂಜೇಶ್ವರ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷರಾದ ಸುಬ್ಬಣ್ಣ ಶೆಟ್ಟಿ,ನಾವುಂದ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ನರಸಿಂಹ ದೇವಾಡಿಗ, ಅಗಸ್ತೇಶ್ವರ ದೇವಸ್ಥಾನ ಕಿರಿಮಂಜೇಶ್ವರ ಇದರ ಅಧ್ಯಕ್ಷಎನ್.ವಿ ಪ್ರಕಾಶ್ ಐತಾಳ್, ಮೂಕಾಂಬಿಕಾ ಭತ್ತ ಒಕ್ಕೂಟದ ಅಧ್ಯಕ್ಷ ಚಂದ್ರ ಪೂಜಾರಿ, ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷ ಮಂಜು ಪೂಜಾರಿ,ಕಾರ್ಯದರ್ಶಿ ಮಂಜುನಾಥ್,ಕಿರಿಮಂಜೇಶ್ವರ ವಲಯದ ಅಧ್ಯಕ್ಷ ಸುರೇಂದ್ರ ನಾಯ್ಕ,ಕೊಲ್ಲೂರು ವಲಯದ ಅಧ್ಯಕ್ಷ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ರವಿ ಪೂಜಾರಿ, ಜನಜಾಗೃತಿ ವೇದಿಕೆ ಗೋಳಿಹೊಳೆ ವಲಯದ ಅಧ್ಯಕ್ಷ ಎಂ.ಆರ್ .ಶೆಟ್ಟಿ,ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಹಕ್ಲಾಡಿ ಗಣಪಯ್ಯ ಶೆಟ್ಟಿ,ಗೋಳಿಹೊಳೆ ಶೇಖರ್ ಶೆಟ್ಟಿ, ಶಿಬಿರದ ಆರೋಗ್ಯ ಸಹಾಯಕಿ ನೇತ್ರಾವತಿ, ಬೈಂದೂರು ತಾಲೂಕಿನ ನವ ಜೀವನ ಸಮಿತಿಯ ಸದಸ್ಯರು ಹೇರೂರು,ವಿಪತ್ತು ನಿರ್ವಹಣಾ ಘಟಕದ ಸದಸ್ಯರು,ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಕಿರಿಮಂಜೇಶ್ವರ ವಲಯದ ಸೇವಾ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬೈಂದೂರು ತಾಲೂಕು ಯೋಜನಾಧಿಕಾರಿ ಕೆ.ವಿನಾಯಕ ಸ್ವಾಗತಿಸಿದರು.ವ್ಯವಸ್ಥಾಪನ ಸಮಿತಿಯ ಜೊತೆ ಕಾರ್ಯದರ್ಶಿ ದಿನೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.ಕಿರಿಮಂಜೇಶ್ವರ ವಲಯದ ಮೇಲ್ವಿಚಾರಕ ರಾಘವೇಂದ್ರ ವಂದಿಸಿದರು.