ಶಿರೂರು: ಚಾರೋಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.ಶಿರೂರು ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭ ರವಿವಾರ ಬ್ಯಾಂಕ್ ಆಫ್ ಬರೋಡಾ ಹತ್ತಿರ ಉದ್ಘಾಟನೆಗೊಂಡಿತು.ನೂತನ ಶಾಖೆಯನ್ನು ವಸಂತ ಮೇಸ್ತ ಉದ್ಘಾಟಿಸಿದರು.

ಚಾರೋಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ರಾಮಚಂದ್ರ ಬಿ.ಶಿರೂರಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯದಲ್ಲಿ ಚಾರೋಡಿ ಮೇಸ್ತ ಸಮಾಜದ ಸಂಘಟನೆಯ ಜೊತೆಗೆ ಸಮಾವೇಶ ನಡೆಸುವ ಚಿಂತನೆಯಿದೆ.ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಣ್ಣಪುಟ್ಟ ಸಾಲ ಪಡೆಯಲು ನೂರೆಂಟು ದಾಖಲೆಗಳ ಅವಶ್ಯಕತೆಯಿದೆ.ಹೀಗಾಗಿ ಸಣ್ಣ ಪ್ರಮಾಣದ ಸಾಲವನ್ನು ಸರಳ ದಾಖಲೆ ಪಡೆದು ಸಹಾಯ ಮಾಡುವ ಮೂಲಕ ಆರ್ಥಿಕ ಶಕ್ತಿ ನೀಡುವುದು ಇದರ ಮೂಲ ಉದ್ದೇಶವಾಗಿದೆ ಎಂದರು.

ಶಿರೂರಿನ ಗ್ರಾಮ ಪುರೋಹಿತ ಸುರೇಶ ಅವಭೃತ ಶುಭಸಂಸನೆಗೈದರು.

ಮುಖ್ಯ ಅತಿಥಿಗಳಾಗಿ ದೀಪಕ್ ಕುಮಾರ್ ಶೆಟ್ಟಿ,ಉದ್ಯಮಿ ಸುರೇಶ ಶೆಟ್ಟಿ ಉಪ್ಪುಂದ,ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಕಟ್ಟಡದ ಮಾಲಿಕ ಚಂದ್ರಹಾಸ್ ಬಿ.ಶಿರೂರಕರ್,ಉಮೇಶ್ ಎಲ್.ಮೇಸ್ತ,ಕೆ.ವಿ ಜಯರಾಮ್,ದುರ್ಗಾಂಬಿಕಾ ದೇವಸ್ಥಾನದ ಅಧ್ಯಕ್ಷ ಕೆ.ಎನ್.ಆಚಾರ್,ರುಕ್ಮಾನಂದ,ಸುಬ್ರಾಯ ಆರ್.ಮೇಸ್ತ,ಮಧುಕರ ನಾಯಕ್,ಬಾಲಚಂದ್ರ ಮೇಸ್ತ,ರಾಘವೇಂದ್ರ ಮೇಸ್ತ,ವಿಶ್ವನಾಥ ಮೇಸ್ತ,ಏತಾಳ ರಾಮಕೃಷ್ಣ ಮೇಸ್ತ,ಬಾಬು ಪಿ.ನಾಯ್ಕ,ಅಣ್ಣಪ್ಪ ವಿ.ಮೇಸ್ತ,ವಸಂತ ಮೇಸ್ತ,ಉಪಾಧ್ಯಕ್ಷ ಕೃಷ್ಣಮೂರ್ತಿ ವಿ.ಸಾಗರ,ನಿರ್ದೇಶಕರಾದ ಉಮೇಶ ಮೇಸ್ತ ಗುಜ್ಜಾಡಿ,ನಾರಾಯಣ ಆಚಾರಿ ಶಿರಸಿ,ರಾಜೇಂದ್ರ ಸಾಗರ,ಎಸ್.ಶ್ರೀಧರ ಶಿವಮೊಗ್ಗ,ರಾಘವೇಂದ್ರ ಮೇಸ್ತ ಬೆಂಗಳೂರು,ವಿನಯ ಮೇಸ್ತ ಶಿರೂರು,ಪ್ರದೀಪ ಬಾಬು ರಾವ ಮೇಸ್ತ ಹೊನ್ನಾವರ,ರುಕ್ಮಾ ಶಿವಮೊಗ್ಗ,ಏಕಾಂಬರ ಸಾಗರ,ಹರೀಶ ಮೇಸ್ತ ಗುಜ್ಜಾಡಿ,ಸುಜಾತ ಮೇಸ್ತ ಹೊನ್ನಾವರ,ಚಂಪಾ ಆರ್.ಶಿರೂರಕರ್,ಕವಿತಾ ಹೆಚ್ ಕುಂದಾಪುರ ಉಪಸ್ಥಿತರಿದ್ದರು.

ಉಮೇಶ ಎಲ್.ಮೇಸ್ತ ಗುಜ್ಜಾಡಿ ಸ್ವಾಗತಿಸಿದರು.ಶಿಕ್ಷಕ ರಾಮನಾಥ ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು.ರಾಜೇಂದ್ರ ಸಾಗರ ವಂದಿಸಿದರು.

 

Leave a Reply

Your email address will not be published. Required fields are marked *

seven + thirteen =