ಬೈಂದೂರು: ಐ.ಸಿ.ಎ.ಐ ಇನ್ಸ್ಟಿಟ್ಯೂಟ್ ಓಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಫೈನಲ್ ಪರೀಕ್ಷೆಯಲ್ಲಿ ತ್ರಿಶಾ ಕ್ಲಾಸಸ್ ಉಡುಪಿಯ ವಿದ್ಯಾರ್ಥಿನಿ ವ್ರಂದಾ ವಿ.ಕಿಣಿ ಉತ್ತೀರ್ಣರಾಗಿದ್ದಾರೆ. ಇವರು ಬೈಂದೂರಿನ ಕೆ. ವೆಂಕಟೇಶ್ ಕಿಣಿ ಹಾಗೂ ನಯನ ಕಿಣಿ ದಂಪತಿಯ ಪುತ್ರಿಯಾಗಿದ್ದು, ಸಿ. ಎ ಗಿರಿಧರ್ ಕಾಮತ್ ಇವರ ’ಗಣೇಶ್ ಆಂಡ್ ಸುಧೀರ್ ಕೋ ಮಂಗಳೂರಿನಲ್ಲಿ ತಮ್ಮ ಆರ್ಟಿಕಲ್ ಷಿಪ್ ಅನ್ನು 2021 ರಲ್ಲಿ ಮುಗಿಸಿದ್ದರು.ಇವರು ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮಿಡಿಯೇಟ್ ಹಾಗೂ ಫೈನಲ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ.