ಬೈಂದೂರು: ಬೈಂದೂರು ಭಾಗದಲ್ಲಿ ಗುರುವಾರ ಮಳೆಯ ಆರ್ಭಟ ಮುಂದುವರಿದಿದೆ.ನದಿ.ತೊರೆಗಳು ತುಂಬಿ ಹರಿಯುತ್ತಿದ್ದು ಬಹುತೇಕ ಕೃಷಿಭೂಮಿ ಜಲಾವೃತಗೊಂಡಿದೆ.ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಒತ್ತಿನೆಣೆ ಗುಡ್ಡ ಜರಿತ ಉಂಟಾಗಿದ್ದು ಹೆದ್ದಾರಿ ಮೇಲ್ಗಡೆ ಮಣ್ಣು ಉರುಳಿದ ಪರಿಣಾಮ ಒಂದು ಭಾಗದ ಸಂಚಾರ ಸ್ಥಗಿತಗೊಳಿಸಲಾಗಿದೆ.ಗುಡ್ಡದ ಮೇಲ್ಬಾಗದಲ್ಲಿ ಬಂಡೆಯೊಂದು ಉರುಳುವ ಅಪಾಯದ ಭೀತಿಯಿದೆ.ಬೈಂದೂರು ಅಗ್ನಿಶಾಮಕ ದಳದ ಸಹಕಾರದಲ್ಲಿ ನೀರು ಸಿಂಪಡಿಸಿ ಬಂಡೆ ಉರುಳಿಸುವ ಪ್ರಯತ್ನ ನಡೆಯುತ್ತಿದ್ದು ಮಳೆ ಮುಂದುವರಿದರೆ ಮತ್ತಷ್ಟು ಗುಡ್ಡ ಕುಸಿಯುವ ಭೀತಿಯಲ್ಲಿದೆ.ಈ ಹಿಂದೆ ಕುಸಿತ ಸಂಭವಿಸಿದ ಒತ್ತಿನೆಣೆ ತಿರುವಿನ ಬಳಿ ಒಂದೆರಡು ವರ್ಷದ ಹಿಂದೆ ಸಿಮೆಂಟ್ ಪ್ಲಾಸ್ಟಿಕ್ ಅಳವಡಿಸಿದ್ದು ಬಹುತೇಕ ಕಡೆ ಬಿರುಕು ಬಿಟ್ಟಿದ್ದು ಈ ಭಾಗದಲ್ಲೂ ಕೂಡ ಕುಸಿಯುವ ಆತಂಕ ಇದೆ. ರಾಷ್ಟ್ರೀಯ ಹೆದ್ದಾರಿ ಮೇಲ್ಗಡೆ ಗುಡ್ಡದ ಕೆಸರು ನೀರು ಹರಿಯುತ್ತಿದೆ.ಈ ಹಿಂದೆ ಕೂಡ ಇದೇ ಭಾಗದಲ್ಲಿ ಕುಸಿತ ಉಂಟಾಗಿತ್ತು.ತಾತ್ಕಾಲಿಕವಾಗಿ ಗುಡ್ಡದ ಸಮೀಪ ಸಂಚಾರದ ಹೆದ್ದಾರಿ ಬಂದ್ ಮಾಡಲಾಗಿದ್ದು ಐ.ಆರ್.ಬಿ,ಆರಕ್ಷಕ ಇಲಾಖೆ ಮುಂದಾಳತ್ವದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ.

ಸ್ಥಳದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,ಠಾಣಾಧಿಕಾರಿ ನಿರಂಜನ ಗೌಡ,ಕ್ರೈಂ ಎಸ್.ಐ ಮಹೇಶ್ ಕಂಬಿ,ಠಾಣೆಯ ಸಿಬಂದಿಗಳು,ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಐ.ಆರ್.ಬಿ ಅಧಿಕಾರಿಗಳು ಹಾಜರಿದ್ದರು.

ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published. Required fields are marked *

twelve + ten =