ಬೈಂದೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ ಶಿರೂರು ಇವರ ಸಹಭಾಗಿತ್ವದಲ್ಲಿ ಶಿರೂರು ಮಾದರಿ ಶಾಲೆಯಲ್ಲಿ ಕಲಿಕೆಗೊಂದು ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು.
ವಿ.ಆರ್.ಡಿ.ಎಫ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕೊಡೆ ವಿತರಿಸಿ ಮಾತನಾಡಿ ಶಿಕ್ಷಣದ ಬಗ್ಗೆ ಪ್ರತಿಯೊಬ್ಬರು ಅತ್ಯಧಿಕ ಪ್ರಾದಾನ್ಯತೆ ನೀಡುತ್ತಿದ್ದಾರೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಪ್ರೋತ್ಸಾಹ ಅಗತ್ಯ.ಸಂಸ್ಥೆಯ ಮೂಲಕ ಗ್ರಾಮೀಣ ಭಾಗದ ಶಾಲೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.ಇರುವ ಅವಕಾಶ ಸದ್ಬಳಕೆಯಾಗಿ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ ಆಗಲಿ ಎಂದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಶಿರೂರು ಘಟಕದ ಅಧ್ಯಕ್ಷ ಕೆ.ವಿಶ್ವನಾಥ ಹೆಗ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ನಾಯ್ಕ, ಶಿರೂರು ಬ್ಯಾಂಕ್ ಆಫ್ ಬರೋಡ ಶಾಖೆಯ ಸೀನಿಯರ್ ಶಾಖಾಧಿಕಾರಿ ಬನವಂತು ವೆಂಕಣ್ಣ ಬಾಬು,ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಶ್ರೀಕ್ಷೇತ್ರ ಧ. ಗ್ರಾ. ಅ.ಯೋ. (ರಿ) ಬೈಂದೂರು ತಾಲೂಕು ಅಧ್ಯಕ್ಷ ವಾಸು ಮೇಸ್ತ,ಶ್ರೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗಯ್ಯ ಶೆಟ್ಟಿ,ಮಾದರಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರಘುವೀರ ಶೇಟ್,ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು, ಗ್ರಾಂ. ಪಂ.ಸದಸ್ಯೆ ಉಷಾ ಜನಾರ್ಧನ,ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಪ್ರಭು ಉಪಸ್ಥಿತರಿದ್ದರು.
ಕಾರ್ಯದರ್ಶಿ ಎಸ್.ಎಚ್.ಸತೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಸಿ. ಎನ್. ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ಸೋಮರಾಯ ಜನ್ನು ವಂದಿಸಿದರು.