ಬೈಂದೂರು: ಜೆ ಸಿ ಐ ಉಪ್ಪುಂದ ಜೇಸಿರೇಟ್ ಮತ್ತು ಜೂನಿಯರ್ ಜೆಸಿ ವಿಭಾಗದ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಕಳೆದ 49 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಉಪ್ಪುಂದದ ಹಿರಿಯ ವೈದ್ಯರಾದ ಡಾ.ಕೆ ಆರ್ ನಂಬಿಯಾರ್ ಹಾಗೂ ಧರ್ಮಪತ್ನಿ ಲತಿಕಾ ನಂಬಿಯಾರ್ ರವರನ್ನು ಜೆಸಿಐ ಉಪ್ಪುಂದ ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿರೇಟ್ ವಿಭಾಗದ ಅಧ್ಯಕ್ಷೆ ರೇಖಾ,ಜೆಸಿಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ, ಪೂರ್ವಾಧ್ಯಕ್ಷರಾದ ಸುಬ್ರಹ್ಮಣ್ಯ ಜಿ ಉಪ್ಪುಂದ, ಜೂನಿಯರ್ ಜೆಸಿ ಅಧ್ಯಕ್ಷೆ ನಿಶಾ ಸಂತೋಷ ಶೆಟ್ಟಿ,ಸದಸ್ಯರುಗಳಾದ ಶಿವಾನಂದ ಗಾಣಿಗ,ಮಂಜುನಾಥ್ ದೇವಾಡಿಗ, ಸೌಮ್ಯ,ಸುಪರ್ಣ,ಸಂತೋಷ್, ಸುಮನ,ಸುಮಿತ್ ಮೊದಲಾದವರು ಉಪಸ್ಥಿತರಿದ್ದರು.