ಕೊಲ್ಲೂರು: ಆರ್.ಎಸ್.ವೆಂಚರ್ಸ್, ಶಾಂತೇರಿ ಕಾಮಾಕ್ಷಿ ಎಂಟರ್ಪ್ರೈಸಸ್ ಇದರ ವತಿಯಿಂದ ಕೊಲ್ಲೂರಿನಲ್ಲಿ ಪ್ರಥಮ ಬಾರಿಗೆ ಆರಂಭವಾದ ದೇವಿ ಮೂಕಾಂಬಿಕಾ ಸರ್ವಿಸ್ ಅಪಾರ್ಟ್ಮೆಂಟ್ ನ್ನು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರವಾದ ಕೊಲ್ಲೂರು ಪಾವಿತ್ರತೆಯ ಜೊತೆಗೆ ಸ್ವಚ್ಚತೆಯ ಜವಬ್ದಾರಿ ಕೂಡ ನಮ್ಮೆಲ್ಲರದಾಗಿದೆ.ಇಲ್ಲಿನ ಪುಣ್ಯಭೂಮಿ ಶಕ್ತಿ ಇನ್ನಷ್ಟು ಇನ್ನಷ್ಟು ವೃದ್ದಿಸಬೇಕಾದರೆ ಭಕ್ತಾಧಿಗಳಿಗೆ ಬೇಕಿರುವ ಅನುಕೂಲಗಳನ್ನು ಒದಗಿಸಬೇಕಾಗಿದೆ.ಅಂತಹ ಒಂದು ಹೊಸ ಪ್ರಯತ್ನ ಆರಂಭಿಸಿರುವುದು ಕ್ಷೇತ್ರಕ್ಕೆ ಅನುಕೂಲ.ಸಮೃದ್ದ ಬೈಂದೂರಿನ ಕನಸನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ರಾಜ್ಯದಲ್ಲೆ ಪ್ರಥಮ ಎಸ್.ಡಿ.ಪಿ ಘಟಕ: ಸಂಸ್ಥೆಯ ಪ್ರವರ್ತಕರಾದ ಕೆ.ವೆಂಕಟೇಶ ಕಿಣಿ ಮಾತನಾಡಿ ದೇವಿ ಮೂಕಾಂಬಿಕಾ ಅಪಾರ್ಟ್ಮೆಂಟ್ನಲ್ಲಿ ಎಮ್.ಎ.ಕೆ ಸಂಸ್ಥೆಯ ಸಹಯೋಗದೊಂದಿಗೆ ಮಾನವ ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಸಲಾಗಿದೆ.ಇದು ರಾಜ್ಯದಲ್ಲೆ ಪ್ರಥಮ ಪ್ರಯೋಗವಾಗಿದೆ ಎಂದರು.
ಕೊಲ್ಲೂರು ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಕೆ.ಚಂದ್ರಶೇಖರ ಶೆಟ್ಟಿ ಶುಭಸಂಸನೆಗೈದರು.ಈ ಸಂದರ್ಭದಲ್ಲಿ ರಾಧಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.
ವೆಂಕಟೇಶ ಕಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅರುಣ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
News;Giri shiruru