ಬೈಂದೂರು; ಕರಾವಳಿಯಲ್ಲಿ ಸುಮಾರು 320 ಕಿ.ಮೀ ಕಡಲು ಹೊಂದಿದೆ.ಸಮುದ್ರ ಪರಿಸರದ ಅತ್ಯಂತ ಸೂಕ್ಷ್ಮ ಜೀವರಾಶಿ ಹೊಂದಿದೆ.ಅಳಿವಿನಂಚಿನಲ್ಲಿರುವ ಕಡಲಾಮೆ ಸಂರಕ್ಷಣೆ ಜಾಗೃತಿ ಮೂಡಿಸಬೇಕಾಗಿದೆ.ನೈಸರ್ಗಿಕ ಜೀವಸಂಕುಲಗಳ ಬೆಳವಣಿಗೆಗೆ ನಮ್ಮ ಅಭಿವೃದ್ದಿ ಅಡಚಣೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ ಕರಿಕಾಳನ್ ಹೇಳಿದರು ಅವರು ಮಂಗಳೂರು ವೃತ್ತ,ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ,ಬೈಂದೂರು ವಲಯ,ಎಫ್.ಎಸ್.ಎಲ್ ಕರಾವಳಿ ಕಾವಲು ಪಡೆ,ಪಡುವಣ ಪ್ರೆಂಡ್ಸ್ (ರಿ.)ಪಡುವರಿ ಹಾಗೂ ಪಾಂಚಜನ್ಯ ಕ್ರೀಡಾಸಂಘ ಪಡುವರಿ ಇವರ ಸಹಯೋಗದಲ್ಲಿ ಸೋಮೇಶ್ವರ ಬೀಚ್‌ನಲ್ಲಿ  ನಡೆದ ವಿಶ್ವ ಕಡಲಾಮೆ ದಿನ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ.ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರಾವಳಿ ಕಾವಲು ಪಡೆ ಠಾಣಾಧಿಕಾರಿ ಬಸವಲಿಂಗ ಕಣಶೆಟ್ಟಿ,ಅರಣ್ಯ ಸಮಿತಿ ಅಧ್ಯಕ್ಷರಾದ ಜೈಸನ್ ಮದ್ದೋಡಿ,ಮಂಜಯ್ಯ ಪೂಜಾರಿ,ಶಿವರಾಜ್ ಪೂಜಾರಿ ಗೋಳಿಹೊಳೆ,ಸಂಪನ್ಮೂಲ ವ್ಯಕ್ತಿ ವಿರಿಲ್,ಕ್ಲೀನ್ ಕುಂದಾಪುರದ ಅನುದೀಪ್,ಬೈಂದೂರು ವಲಯ ಅರಣ್ಯಾಧಿಕಾರಿ ಸಿದ್ದೇಶ್ವರ ಕುಂಬಾರ,ಕಿರಣ ಬಾಬು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರಿನ ವಿದ್ಯಾರ್ಥಿಗಳಿಂದ ಜಾಥಾ ಹಾಗೂ ಸೋಮೇಶ್ವರ ಕಡಲ ಕಿನಾರೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಉಪನ್ಯಾಸಕ ಹರೀಶ್ ಕೋಟ್ಯಾನ್ ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

News/Giri shiruru

 

Leave a Reply

Your email address will not be published.

five × three =