ಶಿರೂರು: ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಇವರ ಆಶ್ರಯದಲ್ಲಿ ನಡೆದ ಮರಾಠಿ ಬಾಂಧವರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಹೊಸೂರಿನಲ್ಲಿ ನಡೆಯಿತು.ವಕೀಲರಾದ ವಸಂತ್ರಾಜ್ ಬಿಲ್ಲವ ಹೊಸೂರು ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿ ಕ್ರೀಡೆ ದೈಹಿಕ ಚಟುವಟಿಕೆಯ ಜೊತೆಗೆ ಬುದ್ದಿ ಮತ್ತು ಶಾರೀರಿಕ ಬೆಳವಣಿಗೆಗೆ ಪೂರಕವಾಗಿದೆ.ಇದರ ಜೊತೆಗೆ ಯುವ ಸಂಘಟನೆ ಸಾಮರಸ್ಯ ಬೆಳೆಸುತ್ತದೆ.ಕ್ರಿಯಾಶೀಲ ಚಿಂತನೆಗಳು ಊರಿನ ಅಭಿವೃದ್ದಿಗೆ ಸಹಕಾರ ಎಂದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಸ್ತಯ್ಯ ಪೂಜಾರಿ,ದಯಾನಂದ ಮರಾಠಿ,ಹೂವಯ್ಯ ಮರಾಠಿ,ಶೇಷ ಮರಾಠಿ,ಮಾದೇವ ಪೂಜಾರಿ ಕಿಸ್ಮತ್ತಿ,ಉದಯ ಮಾಕೋಡಿ,ವಾಸುದೇವ ಮರಾಠಿ,ನಾರಾಯಣ ಮರಾಠಿ,ಕೃಷ್ಣ ಮರಾಠಿ ಉಪಸ್ಥಿತರಿದ್ದರು.
ನಾಗಪ್ಪ ಮರಾಠಿ ಹೊಸೂರು ಸ್ವಾಗತಿಸಿದರು.ರಾಜು ಮರಾಠಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
News/Giri shiruru