ಬೈಂದೂರು: ಬಹುನಿರೀಕ್ಷಿತ ವಿಧಾನಸಭಾ ಚುನಾವಣೆ ಪೂರ್ಣಗೊಂಡಿದೆ.ಫಲಿತಾಂಶ ಪೈನಲ್ ಆಗಿ ನೂತನ ಮಂತ್ರಮಂಡಲ ಕೂಡ ರಚನೆಯಾಗಿದೆ.ಜಿಲ್ಲೆಯ ಬಹುಮುಖ್ಯ ಕ್ಷೇತ್ರವಾದ ಬೈಂದೂರು ವಿಧಾನಸಭಾ ಕ್ಷೇತ್ರ ಫಲಿತಾಂಶ ಮಾತ್ರ ಕಾಂಗ್ರೆಸ್ ಪಾಳಯಕ್ಕೆ ನುಂಗಲಾಗದ ಬಿಸಿತುಪ್ಪವಾದರೆ ಬಿಜೆಪಿ ಪಾಲಿಗೆ ಸಂಘಟಿತ ಹೋರಾಟದ ಗೆಲುವಿನ ಸಂಭ್ರಮ  ದಕ್ಕಿಸಿಕೊಂಡಿದೆ.ಗಂಟಿಹೊಳೆಗೆ ಮೊದಲ ಚುನಾವಣೆಯಲ್ಲೆ ಶಾಸಕ ಸ್ಥಾನ ದೊರೆತಿದೆ.ಹಿರಿಯ ರಾಜಕಾರಣಿ ಕೆ.ಗೋಪಾಲ ಪೂಜಾರಿ ಯವರಿಗೆ ಬೈಂದೂರು ಕ್ಷೇತ್ರ ಸೋಲಿನ ಗಿಪ್ಟ್ ಕೊಟ್ಟಿದೆ.ಈ ಎಲ್ಲಾ ಸಾಧಕ ಬಾಧಕಗಳ ನಡುವೆ ಉಭಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದಾಗಿದೆ.ಮಾತ್ರವಲ್ಲದೆ ವಾಸ್ತವತೆ ಒಪ್ಪಿಕೊಂಡು ನಾಯಕರುಗಳು ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ನೂರಕ್ಕೆ ನೂರರಷ್ಟಿದೆ.

ನಾಯಕರು ಹೆಸರಿಗೆ ಮಾತ್ರ, ಮತದಾರನೆ ಸುಪ್ರೀಮ್: ಬೈಂದೂರು ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಯಲ್ಲಿ ಗೆದ್ದ್ದಿದ್ದು ಮತದಾರ ಮತ್ತು ಬಿಜೆಪಿಯ ಕಾರ್ಯಕರ್ತರು.ಎರಡು ಪಕ್ಷದಲ್ಲೂ ಕೂಡ ನಾಯಕರೆನಿಸಿಕೊಂಡವರು ಕೇವಲ ಲೆಕ್ಕಾಚಾರ ಕೊಡಲು ಬಿಟ್ಟರೆ ಮತದಾರರ ಎದುರು ವರ್ಕೌಟ್ ಆಗಿಲ್ಲ. ಬಿಜೆಪಿಯ ಗುರುರಾಜ ಗಂಟಿಹೊಳೆ ಗೆಲುವು ಸಲಿಸಾಗಿ ದೊರೆತಿದ್ದಲ್ಲ.ಒಂದು ದೊಡ್ಡ ಸಂಘಟಿತ ಹೋರಾಟಕ್ಕೆ ಸಿಕ್ಕ ಫಲವಾಗಿದೆ.ಇಪ್ಪತ್ತು ದಿನಗಳಲ್ಲಿ ಅತೀ ದೊಡ್ಡ ಕ್ಷೇತ್ರವನ್ನು ಸಂಘಟಿಸಬೇಕು ಅದರಲ್ಲೂ ಹಾಲಿ ಶಾಸಕರ ವಿರೋಧ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಸೇರಿದಂತೆ ಅನೇಕ ಶಕ್ತಿ ಕೇಂದ್ರದ ನಾಯಕರೆನಿಸಿಕೊಂಡವರು ಸಾಲು ಸಾಲು ಪಕ್ಷಾಂತರ,ಜೊತೆಗಿದ್ದ ಕೆಲವು ನಾಯಕರ ಒಳಕುಸ್ತಿ ಇವೆಲ್ಲದರ ನಡುವೆ ಆರು ತಿಂಗಳಿಂದ ಬೂತ್ ಮಟ್ಟದಲ್ಲಿ ತಯಾರಿ ಮಾಡಿಕೊಂಡ ಕ್ಷೇತ್ರದ ಜನತೆಯ ವಿಶೇಷ ಅನುಕಂಪ ಇರುವ ನಾಲ್ಕು ಬಾರಿ ಶಾಸಕರಾದ ಕೆ.ಗೋಪಾಲ ಪೂಜಾರಿ ಯವರನ್ನು ಮಣಿಸುವುದೆಂದರೆ ಅದು ಬಿಜೆಪಿ ಪಾಲಿನ ಬಹುದೊಡ್ಡ ವಿಜಯವಾಗಿದೆ.ಅಸಲಿಗೆ ಈ ಬಾರಿ ಬೈಂದೂರು ಕ್ಷೇತ್ರದಲ್ಲಿ ಬೆರಳೆಣಿಕೆಯ ಒಂದೆರಡು ಸಾಮಾನ್ಯ ಕಾರ್ಯಕರ್ತ ನಾಯಕರಿಗೆ ಒಂದಿಷ್ಟು ಜನಬೆಂಬಲ ಇದೆ ಹೊರತುಪಡಿಸಿದರೆ ಉಳಿದೆಲ್ಲಾ ನಾಯಕರು ಹೆಸರಿಗೆ ಮಾತ್ರ ನಾಯಕರು.ಹತ್ತಾರು ವರ್ಷಗಳಿಂದ ಇವರೆ ನಾಯಕರು ಎನ್ನುವ ಭ್ರಮೆಯಲ್ಲಿದ್ದ ಜನರಿಗೆ ಈ ಬಾರಿ ಅಸಲಿ ಸಾಮರ್ಥ್ಯ ತಿಳಿದಿದೆ.ಒಂದು ಹಂತದಲ್ಲಿ ಬೈಂದೂರು ಬಿಜೆಪಿಗೆ ಜಿ.ಪಂ ಮಾಜಿ ಸದಸ್ಯ ಕೆ.ಬಾಬು ಶೆಟ್ಟಿ,ಶಂಕರ ಪೂಜಾರಿ ಯಂತಹ ನಾಯಕರು ಹೊರಹೋಗಿರುವುದು ಬಹುಶಃ ಬಹುದೊಡ್ಡ ಆಘಾತ ಎಂದು ಕಾರ್ಯಕರ್ತರು ಭಾವಿಸಿದ್ದರು.ಆದರೆ ಈ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಗಿಂತ ಕಡಿಮೆ ಮತ ಪಡೆದಿದೆ.ಮಾತ್ರವಲ್ಲದೆ ತಗ್ಗರ್ಸೆ ಮುಂತಾದ ಕಡೆ ಕಾಂಗ್ರೆಸ್ ಲೀಡ್ ಬರುವ ಬೂತ್‌ಗಳಲ್ಲೂ ಈ ಬಾರಿ ಬಿಜೆಪಿ ಮುನ್ನೆಡೆ ಸಾಧಿಸಿದೆ.ಈ ಸೇರ್ಪಡೆಗಳು ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ನೀಡಿದಂತಿದೆ.ನಾಯಕರನ್ನು ಸಂತೈಸಿ ಸಮಾಧಾನಿಸುವಷ್ಟು ಸಮಯ ಬಿಜೆಪಿಯಲ್ಲಿಲ್ಲದ ಕಾರಣ ಉದ್ಯೋಗ,ವ್ಯವಹಾರದಲ್ಲಿ ಬೆಂಗಳೂರು,ಮುಂಬೈ ಮುಂತಾದ ಹೊರಭಾಗದಲ್ಲಿದ್ದ ಬೈಂದೂರು ಭಾಗದ ಉದ್ಯಮಿ,ಉದ್ಯೋಗಿಗಳನ್ನು ಪಟ್ಟಿ ಮಾಡಿದ ಬಿಜೆಪಿ ಅವರ ಮೂಲಕವೇ ಪ್ರತಿ ಬೂತ್‌ನ ಕಾರ್ಯಕರ್ತರಿಗೆ ಶಕ್ತಿ ಕೊಡಿಸುವ ಕೆಲಸ ಮಾಡಿದೆ.ಬಹಿರಂಗ ಸಭೆ,ಜಾಥಾ,ಸಭೆಗಳು ಸಹಜವಾಗಿ ಕಂಡುಬಂದರು ಸಹ ವಾರ್‌ರೂಮ್ ಮೂಲಕ ಅಸಂಖ್ಯಾತ ಕಾರ್ಯಕರ್ತರು ತೆರೆಮರೆಯಲ್ಲಿ ಕಾರ್ಯಕರ್ತರನ್ನು,ಸಮುದಾಯದ ನಾಯಕರನ್ನು ಸಂಘಟಿಸುವುದು ಬಿಜೆಪಿಗೆ ಬಹುದೊಡ್ಡ ಸಕ್ಸಸ್ ಆಗಿದೆ.ಜೊತೆಗೆ ಕಾಂಗ್ರೆಸ್ ಪಾಳಯದ ನಾಯಕರು ಅವರ ಬಗ್ಗೆ ಯುವಕರಿಗಿಲ್ಲದ ಒಲವು ಹಾಗೂ ಇರುವ ಯುವ ನಾಯಕರು ಕೂಡ ಗೆಲ್ಲುವ ಮುಂದೆ ಹೆಚ್ಚಿದ ಆತ್ಮವಿಶ್ವಾಸಗಳು ಕಾಂಗ್ರೆಸ್‌ನ್ನು ಸೋಲಿನತ್ತಾ ತಳ್ಳಿದೆ.ಈ ಎಲ್ಲಾ ವಿಚಾರಗಳ ಮದ್ಯೆ ಗೋಪಾಲ ಪೂಜಾರಿ ಯವರಿಗೆ ವಯಕ್ತಿಕವಾಗಿ ಬಿಜೆಪಿಯ ನಾಯಕರಿಂದಲು ಕೂಡ ಅನುಕಂಪವಿದೆ.ಈ ಬಾರಿ ಅವರ ಅದೃಷ್ಟದ ಯೋಗ ಕೈಕೊಟ್ಟಿದೆ.ಒಂದೊಮ್ಮೆ ಗೆದ್ದರೆ ಮಂತ್ರಿಯಾಗುವ ಅವಕಾಶ ಇತ್ತು.ಬೈಂದೂರಿಗೂ ಒಂದು ನಿರೀಕ್ಷೆ ಕೈತಪ್ಪಿದೆ.ಹಾಗೇ ನೋಡಿದರೆ ಕುಂದಾಪುರ ತಾಲೂಕಿಗೆ ದೊಡ್ಡ ಮಟ್ಟದ ನಾಯಕರೆಲ್ಲರೂ ನೋವಿನ ವಿದಾಯ ಹೇಳಿದಂತಿದೆ.ಕೆ.ಪ್ರತಾಪಚಂದ್ರ ಶೆಟ್ಟಿ,ಹಾಲಾಡಿ ಶ್ರೀನಿವಾಸ ಶೆಟ್ಟಿ,ಕೆ.ಗೋಪಾಲ ಪೂಜಾರಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯ ಹಿನ್ನೆಡೆ ಕಂಡಂತಿದೆ.

ಬಿಜೆಪಿ ಮುಂದಿರುವ ಸವಾಲುಗಳೇನು; ಈಗಿನ ಶಾಸಕರಾದ ಗುರುರಾಜ ಗಂಟಿಹೊಳೆ ಮುಂದೆ ಉತ್ತಮ ಭವಿಷ್ಯವಿದೆ.ಪಕ್ಷ ಸಂಘಟನೆ,ಯುವ ನಾಯಕರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸೃಜನಶೀಲತೆ,ಸಾಹಿತ್ಯ,ಸಾಂಸ್ಕ್ರತಿಕ ಆಸಕ್ತಿ ಇವೆಲ್ಲಾ ಪೂರಕವಾಗಿ ರೂಪಿಸಿಕೊಂಡು ದೊರೆತ ಅವಕಾಶವನ್ನು ಅತ್ಯುತ್ತಮವಾಗಿ ಮುನ್ನೆಡೆಸಿಕೊಂಡಾಗ ಬೈಂದೂರು ಕ್ಷೇತ್ರದ ಬಹುದೊಡ್ಡ ಮುಂದಾಳುವಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.ಜೊತೆಗೆ ವಿರೋಧ ಪಕ್ಷವಾದ ಕಾರಣ ಅನುದಾನ ಹಾಗೂ ರಾಜ್ಯ ಸರಕಾರದ ಕ್ರಪಾಕಟಾಕ್ಷ ಕೊರತೆ.ಜೊತೆಗೆ ಬಹುದೊಡ್ಡ ಹಿನ್ನೆಡೆಯಗಿದೆ.ಹಗೆಯ ರಾಜಕಾರಣ ಕೂಡ ಸಹಜವಾಗಿರುತ್ತದೆ.ಹೀಗಾಗಿ ಹುಮ್ಮಸ್ಸು ಮತ್ತು ನಾಯಕತ್ವ ಕಾಪಾಡಿಕೊಳ್ಳಬೇಕಾಗಿದೆ..

ಕಾಂಗ್ರೆಸ್ ಯೋಜನೆಗಳೇನು; ಕ್ಷೇತ್ರ ಕಳೆದುಕೊಂಡಿದೆ.ಹಳೆ ಮುಖಗಳ ಬದಲಾವಣೆಗೆ ಇದು ಸಕಾಲ.ಪರಸ್ಪರ ದೂರುವುದಕ್ಕಿಂತ ಸಾಮರ್ಥ್ಯ ಇಲ್ಲದ ನಾಯಕರು ಕುರ್ಚಿ ಬಿಟ್ಟು ಯುವಕರಿಗೆ ಅವಕಾಶ ಕೊಡಬೇಕಿದೆ.ಸರಕಾರ ಇರುವ ಕಾರಣ ಇಲಾಖೆಗಳ ಮೇಲಿನ ನಿಯಂತ್ರಣ ಹಾಗೂ ರಾಜಿ ಹೊಂದಾಣಿಕೆ ರಾಜಕೀಯ ಮಾಡದೆ ಬಿಜೆಪಿ ಕಟ್ಟಿ ಹಾಕುವ ಪ್ರತಿ ಅವಕಾಶ ಉಪಯೋಗಿಸಿಕೊಳ್ಳಬೇಕಿದೆ ಮತ್ತು ಜಿ.ಪಂ. ತಾ.ಪಂ.ತೆಕ್ಕೆಗೆ ಪಡೆಯುವ ಹೊಸ ತಂಡ ರೂಪಿಸಬೇಕಿದೆ.ಒಟ್ಟಾರೆ ಬೈಂದೂರಿನ ಪಾಲಿಗೆ ಈ ಬಾರಿ ಗೆಲುವು ಅಲ್ಲದೆ ಸೋಲು ಅಲ್ಲದೆ ಅಭಿವ್ರದ್ದಿ ವಿಚಾರದಲ್ಲಿ ಮಾತ್ರ ಸರಕಾರದ ಕ್ರಪೆ ಪಡೆಯುವ ದಾರಿ ಮಾತ್ರ ಸುಲಭದಲ್ಲ ಎನ್ನುವುದು ವಾಸ್ತವ.

News/Shirurunews.com

 

 

Leave a Reply

Your email address will not be published.

six + five =