ಬೈಂದೂರು: ಬೈಂದೂರು ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಮರವಂತೆ ಮೀನುಗಾರಿಕಾ ಬಂದರಿಗೆ ಬೇಟಿ ನೀಡಿದರು ಬಳಿಕ ಮೀನುಗಾರರು ಹಾಗೂ ಮೀನುಗಾರ ಮುಖಂಡರ ಜೊತೆ ಮಾತುಕತೆ ನಡೆಸಿದರು.ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಗಂಗೊಳ್ಳಿ,ಮರವಂತೆ ಸೇರಿದಂತೆ ಬಂದರು ಅಭಿವೃದ್ದಿ ಹಾಗೂ ಮೀನುಗಾರರ ಬೇಡಿಕೆಗಳನ್ನು ನಿರ್ಲಕ್ಷಿಸಿದರಿಂದ ಮರವಂತೆ ಬಂದರು ಸಮುದ್ರ ಪಾಲಾಗುವ ಭೀತಿ ಉಂಟಾಗಿದೆ.ಹೀಗಾಗಿ ಮೀನುಗಾರರನ್ನು ನಿರ್ಲಕ್ಷಿಸಿದ ಪರಿಣಾಮ ಮತದಾನ ಬಹಿಷ್ಕರಿಸುವುದಾಗಿ ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದರು.ಈ ಕುರಿತಂತೆ ಬೈಂದೂರು ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಮರವಂತೆ ಬಂದರಿಗೆ ಬೇಟಿ ನೀಡಿದರು.ಬಿಜೆಪಿ ಸರಕಾರ ಕೇವಲ ಭರವಸೆ ನೀಡಿದ್ದು ಹೊರತುಪಡಿಸಿದರೆ ಯಾವುದೇ ಯೋಜನೆಗಳನ್ನು ಸಾಕಾರಗೊಳಿಸಿಲ್ಲ.ಶಿರೂರು ಹಾಗೂ ಮರವಂತೆಯಲ್ಲಿ ಉಂಟಾದ ದೋಣಿ ಅವಘಡಗಳಿಗೆ ಇದುವರೆಗೆ ಪರಿಹಾರ ನೀಡಿಲ್ಲ.ಕಾಂಗ್ರೇಸ್ ಪಕ್ಷದ ಅವಿರತ ಹೋರಾಟದ ಬಳಿಕ ಚುನಾವಣೆ ಸಮಯದಲ್ಲಿ ಮೀನುಗಾರರಿಗೆ ಸ್ವಲ್ಪ ಸೀಮೆಎಣ್ಣೆ ನೀಡುವ ನಾಟಕ ನಡೆಯುತ್ತಿದೆ.ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ಮೊದಲ ಆದ್ಯತೆಯಲ್ಲಿ ಗಂಗೊಳ್ಳಿ,ಮರವಂತೆ ಸೇರಿದಂತೆ ಮೀನುಗಾರರ ಬೇಡಿಕೆಗಳಿಗೆ ಪ್ರಥಮ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು ಹಾಗೂ ಮತದಾನ ಸಂವಿಧಾನದ ಹಕ್ಕು ಆಗಿರುವುದರಿಂದ ಪ್ರತಿಯೊಬ್ಬರು ಮತ ಚಲಾಯಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ,ಕಾಂಗ್ರೇಸ್ ಮುಖಂಡರಾದ ಎಸ್.ರಾಜು ಪೂಜಾರಿ,ಮೀನುಗಾರರ ಮುಖಂಡರಾದ ಚೌಕಿ ಉದಯ ಖಾರ್ವಿ, ಚಂದ್ರಗುಪ್ತ, ರಾಮಕೃಷ್ಣ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.