ಬೈಂದೂರು,: ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ವಿಶ್ವದಲ್ಲೆ ಭಾರತ ಗುರುತಿಸಿಕೊಳ್ಳುವಂತಾಗಿದೆ.ದೇಶದಲ್ಲಿ ಜನಸಾಮಾನ್ಯರು ಸೇರಿದಂತೆ ನಾಗರೀಕರಿಗೆ ಯೋಗ್ಯವಾದ ನೂರಾರು ಯೋಜನೆಗಳು ಜಾರಿಗೆ ತಂದಿದೆ.ಅಭಿವೃದ್ದಿಯಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ.ಬೈಂದೂರಿನಲ್ಲಿ ಬಿಜೆಪಿ ಜಯಗಳಿಸುವ ಉದ್ದೇಶದಿಂದ ಸಂಘಟಿತರಾಗಿ ಕೆಲಸ ಮಾಡಬೇಕು ಮತ್ತು ಸಾಮಾನ್ಯ ಕಾರ್ಯಕತ೯ ಶಾಸಕನಾಗಿ ಆಯ್ಕೆಯಾಗಬೇಕು ಎಂದು ಮಹಾರಾಷ್ಟ್ರ ರಾಜ್ಯದ ವಿಧಾನಪರಿಷತ್ ಸದಸ್ಯ ಪ್ರವೀಣ್ ದಾರೇಕರ್ ಹೇಳಿದರು ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ಬಿಜೆಪಿ ಮಂಡಲದ ಉಪಾಧ್ಯಕ್ಷ ಗಣೇಶ ಗಾಣಿಗ ಹಾಜರಿದ್ದರು.
News/Girish shiruru