ಶಿರೂರು: ಇದೇನೋ ಉತ್ತರ ಕರ್ನಾಟಕವೋ ಅಥವಾ ಬೇರೆಲ್ಲೋ ಕಂಡು ಬಂದ ಚಿತ್ರವಲ್ಲ ಬುದ್ದಿವಂತರ ಜಿಲ್ಲೆಯಾದ ಉಡುಪಿ ಜಿಲ್ಲೆಯ ಆಲಂದೂರಿನಲ್ಲಿ ಕಾಣ ಸಿಗುವ ದೃಶ್ಯ.ಇಲ್ಲಿನ ಶಿರೂರು ಗ್ರಾಮದ ಬಾಳಿಗದ್ದೆ -ಕುಂಬ್ರಿಕೊಡ್ಲು ರಸ್ತೆಗೆ ಸರಕಾರ 50 ಲಕ್ಷ ರೂಪಾಯಿ ವೆಚ್ಚದ ಅನುದಾನದಲ್ಲಿ ಘೋಷಿಸದ ಕಾಂಕ್ರೀಟ್ ರಸ್ತೆಯಾಗಿದೆ.ಆದರೆ ಇದರ ಗುತ್ತಿಗೆದಾರ ಮಾತ್ರ ಸಮರ್ಪಕ ಕಾಮಗಾರಿ ನಡೆಸದೆ ರಸ್ತೆ ಮದ್ಯದಲ್ಲಿ ಕಂಬ ಉಳಿಸಿಬಿಟ್ಟಿದ್ದಾನೆ.
ರಸ್ತೆಯಲ್ಲೆ ಉಳಿದ ವಿದ್ಯುತ್ ಕಂಬ; ಶಿರೂರು ಗ್ರಾಮದ ಬಾಳಿಗದ್ದೆ -ಕುಂಬ್ರಿಕೊಡ್ಲು ರಸ್ತೆಗೆ ಶಾಸಕರ ಮಲೆನಾಡು ಅಭಿವೃದ್ದಿ ಯೋಜನೆಯಿಮದ 50 ಲಕ್ಷ ರೂಪಾಯಿ ಅನುದಾನದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ.ಚುನಾವಣೆ ಘೋಷಣೆ ಹಿನ್ನೆಯಲ್ಲಿ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ.ಆದರೆ ಗುತ್ತಿಗೆದಾರರು ರಸ್ತೆಯಲ್ಲಿರುವ ವಿದ್ಯುತ್ ಕಂಬ ಕೂಡ ಇಲಾಖೆ ಗಮನಕ್ಕೆ ತಂದು ಸ್ಥಳಾಂತರಿಸಿಲ್ಲ.ಹೀಗಾಗಿ ಕಾಂಕ್ರೀಟ್ ರಸ್ತೆಯ ಮದ್ಯ ಇರುವ ವಿದ್ಯುತ್ ಕಂಬದಿಂದ ಬೈಕ್ ಸವಾರರು ಡಿಕ್ಕಿ ಹೊಡೆಯಲು ಅಪಾಯಕಾರಿ ತಾಣವಾಗಿದೆ.ಈ ಕುರಿತು ಪ್ರತಿಕ್ರಯಿಸಿದ ಪಿ.ಡಬ್ಲೂ.ಡಿ ಇಂಜಿನಿಯರ್ ಮೂರ್ತಿ ಈ ವಿಷಯ ಗಮನಕ್ಕೆ ಬಂದಿದೆ ಸ್ಥಳಕ್ಕೆ ಬೇಟಿಕೊಟ್ಟು ವಾಸ್ತವತೆಯನ್ನು ಗಮನಿಸಿ ಕ್ರಮಕೈಗೊಳ್ಳುತ್ತೇನೆ ಎಂದರು.