ಬೈಂದೂರು: ಕಳೆದ ಐದು ವರ್ಷಗಳಿಂದ ಮರವಂತೆ ಭಾಗದ ಮೀನುಗಾರರನ್ನು ಆಡಳಿತ ಪಕ್ಷ ಸಂಪೂರ್ಣ ನಿರ್ಲಕ್ಷಿಸಿದೆ.ಮುಖ್ಯಮಂತ್ರಿ,ಅಧಿಕಾರಿಗಳು,ಸಚಿವರು ಬಂದು ಹೋದರು ಕನಿಷ್ಟ ಪಕ್ಷ ಬಂದರು ರಿಪೇರಿ ಕೂಡ ಆಗಿಲ್ಲ.ಎಂಟು ವರ್ಷಗಳಿಂದ ಸಚಿವರು,ಅಧಿಕಾರಿಗಳು ಸೇರಿದಂತೆ ಹಲವು ಕಡೆ ನಿಯೋಗಗಳ ಜೊತೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.2ನೇ ಹಂತದ ಕಾಮಗಾರಿಗೆ 85 ಕೋಟಿ ರೂಪಾಯಿ ಮಂಜೂರಾತಿ ನೀಡಿ ಬಿಡುಗಡೆಗೊಳಿಸಿದರು ಕೂಡ ಕಾಮಗಾರಿ ಆರಂಭವಾಗಿಲ್ಲ.ಇದರಿಂದಾಗಿ ಪ್ರತಿವರ್ಷ ಮೀನುಗಾರರು ತಮ್ಮ ಸ್ವಂತಃ ಖರ್ಚಿನಿಂದ 30 ಲಕ್ಷ ರೂಪಾಯಿ ವ್ಯಯಿಸಿದ್ದಾರೆ.ಬಂದರು ನಿರ್ಲಕ್ಷದಿಂದ ಈ ಭಾಗದಲ್ಲಿ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ.ಈ ವರ್ಷ ಮಳೆಗಾಲದಲ್ಲಿ ಬಂದರು ಕಡಲಪಾಲಾಗುವ ಆತಂಕ ಇದೆ.ಹೀಗಾಗಿ ಜಿಲ್ಲಾಡಳಿತ ಇಲ್ಲಿನ ಸಮಸ್ಯೆಗೆ ಸ್ಪಂಧಿಸದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಮರವಂತೆ ಮೀನುಗಾರರು ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ.ಈ ಭಾಗದಲ್ಲಿ ಸುಮಾರು 1500 ದೋಣಿಗಳಿದ್ದು ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ.ಬಂದರು ಸಮಸ್ಯೆಯಿಂದ ಮೀನುಗಾರಿಕೆಯನ್ನು ಕೈಬಿಡುವಂತಾಗಿದೆ.ಹೀಗಾಗಿ ಸ್ಪಂಧಿಸದ ಸರಕಾರದ ವಿರುದ್ದ ಚುನಾವಣೆ ಬಹಿಷ್ಕರಿಸುವ ಮೂಲಕ ನಮ್ಮ ನೋವು ವ್ಯಕ್ತಪಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮರವಂತೆ ಮೀನುಗಾರರ ಸಂಘದ ಅಧ್ಯಕ್ಷ ವಾಸು ಖಾರ್ವಿ,ಮಾಜಿ ಅಧ್ಯಕ್ಷ ಮೋಹನ ಖಾರ್ವಿ,ಶ್ರೀರಾಮ ಭಜನಾ ಮಂದಿರದ ಚಂದ್ರ ಖಾರ್ವಿ,ಮಾಜಿ ಅಧ್ಯಕ್ಷ ವೆಂಕಟರಮಣ ಖಾರ್ವಿ,ಸೋಮಯ್ಯ ಖಾರ್ವಿ,ಮಾರ್ಕೆಟಿಂಗ್ ಕಮಿಟಿ ಅಧ್ಯಕ್ಷ ಶಂಕರ ಖಾರ್ವಿ,ಉಪಾಧ್ಯಕ್ಷ ಸುರೇಶ್ ಖಾರ್ವಿ,ಶ್ರೀಕಾಂತ ಹಾಗೂ ಮೀನುಗಾರರು ಹಾಜರಿದ್ದರು.
News/Girish shiruru