ಬೈಂದೂರು: ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಶರವನ್ನವರಾತ್ರಿ ಮಹೋತ್ಸವ ಅ.11 ರಿಂದ ಅ.21ರ ವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ದುರ್ಗಾಹೊಮ,ದುರ್ಗಾ ಪಾರಾಯಣ,ಚಂಡಿಕಾಹೋಮ,ಮಹಾಮಂಗಳಾರತಿ,ರಂಗಪೂಜೆ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಪ್ರತಿದಿನ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆಯಲ್ಲಿ ತಿಳಿಸಲಾಗಿದೆ.