ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು ಕಳೆದ ಸಾಲಿನಲ್ಲಿ ರೂಪಾಯಿ 434 ಕೋಟಿ ರೂಪಾಯಿ ವ್ಯವಹಾರ ನಡೆಸಿ ರೂಪಾಯಿ 85 ಲಕ್ಷ ರೂಪಾಯಿ ನಿವ್ಹಳ ಲಾಭ ಗಳಿಸಿದೆ ಹಾಗೂ ಸಂಘದ ಸದಸ್ಯರಿಗೆ ಶೇ.14% ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಮಂಗಳವಾರ ಬೈಂದೂರು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಪ್ರದಾನ ಕಛೇರಿಯಲ್ಲಿ ನಡೆದ 24ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಎಂಟು ಶಾಖೆಗಳನ್ನು ಹೊಂದಿದ್ದು.ಬೈಂದೂರಿನ ಪ್ರಧಾನ ಕಛೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸಲಾಗಿದ್ದು ಸಂಸ್ಥೆ ಬೆಳ್ಳಿ ಹಬ್ಬ ಆಚರಿಸುವ ವೇಳೆಗೆ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಛೇರಿ ಉದ್ಘಾಟನೆಗೊಳ್ಳಲಿದೆ ಹಾಗೂ ಶೀಘ್ರದಲ್ಲಿ ಸಾಹೇಬ್ರಕಟ್ಟೆ ಹಾಗೂ ಹೆಬ್ರಿಯಲ್ಲಿ ನೂತನ ಶಾಖೆ ಉದ್ಘಾಟನೆಗೊಳ್ಳಲಿದೆ ಹಾಗೂ ನಮ್ಮ ಸಂಸ್ಥೆ ರಾಷ್ಟ್ರೀಕೃತ ಸಂಸ್ಥೆಗೆ ಕಡಿಮೆ ಇಲ್ಲದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಡಿಜಿಟಲೀಕರಣ ಮಾಡಲಿದ್ದು ಮುಂದಿನ ವರ್ಷ 1 ಕೋಟಿಗೂ ಅಧಿಕ ಲಾಭ ಗಳಿಸಲಿದೆ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬಂದ್ದಿಗಳ ಸಹಕಾರದಿಂದ ಸೊಸೈಟಿ ಇನ್ನಷ್ಟು ಪ್ರಗತಿ ಸಾಧಿಸಿದೆ ಎಂದರು.
ನಿರ್ದೇಶಕರಾದ ಎಸ್.ರಾಜು ಪೂಜಾರಿ,ಕೆ.ಶಂಕರ ಪೂಜಾರಿ,ಚಿಕ್ಕು ಪೂಜಾರಿ, ಕಲ್ಪನಾ ಭಾಸ್ಕರ್,ಯು.ಕೇಶವ ಪೂಜಾರಿ,ಕೆ.ಶ್ರೀನಿವಾಸ ಪೂಜಾರಿ,ಜಯಸೂರ್ಯ ಪೂಜಾರಿ,ಶೇಖರ ಪೂಜಾರಿ ನಾಗೂರು,ಉದಯ ಜಿ.ಪೂಜಾರಿ,ವೆಂಕಟೇಶ ಮಾಚ ಪೂಜಾರಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ನಿರ್ದೇಶಕರಾದ ಎಸ್.ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಗಣೇಶ ಬಿ.ಪೂಜಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.