ಶಿರೂರು: ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ,ಶ್ರೀ ದುರ್ಗಾಂಬಿಕಾ ಸೇವಾ ಸಂಘ (ರಿ.)ಚಾರೋಡಿ ಮೇಸ್ತ ಸಮಾಜ ಕೋಟೆಮನೆ ಶಿರೂರು ಇದರ 33ನೇ ವರ್ಷದ ವಾರ್ಷಿಕ  ಪ್ರತಿಷ್ಠಾ ವರ್ಧಂತ್ಯೋತ್ಸವ ಏ.05 ಹಾಗೂ 06 ರಂದು ನಡೆಯಲಿದೆ.

ಏ.05 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಗಣೇಶ ಪೂಜಾ,ಮಹಾ ಸಂಕಲ್ಪ,ಪುಣ್ಯಾಹ,ನಾಗ ಹಾಗೂ ಹೈಗುಳಿ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಏ.06 ರಂದು ಬೆಳಿಗ್ಗೆ ಶ್ರಿದೇವಿಯ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಽ ವಿಧಾನಗಳು ನಡೆಯಲಿದೆ ಹಾಗೂ ಶ್ರಿದೇವಿಯ ಪ್ರತಿಷ್ಠಾ ವರ್ಧಂತಿ ಹಾಗೂ ಚಂಡಿಕಾ ಹವನ ಹಾಗೂ ಮದ್ಯಾಹ್ನ ಮಹಾಅನ್ನಸಂರ್ತಣೆ ನಡೆಯಲಿದೆ.ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಬಳಿಕ ಝೇಂಕಾರ್ ಮೆಲೋಡಿಸ್ ಭಟ್ಕಳ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

 

 

Leave a Reply

Your email address will not be published. Required fields are marked *

5 × five =