ಶಿರೂರು: ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು ಶಿರೂರು ಇದರ 8ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಬಪ್ಪನಬೈಲುವಿನಲ್ಲಿ ನಡೆಯಿತು.
ತೆಂಕುತಿಟ್ಟಿನ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ ಮಾತನಾಡಿ ಕಲಾವಿದರನ್ನು ಗೌರವಿಸುವ ಮೂಲಕ ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಂಘ ಸಂಸ್ಥೆಗಳ ಪ್ರಯತ್ನದಿಂದ ಯಕ್ಷಗಾನ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿಯನ್ನು ಕಂಡಿದೆ.ಕಲೆ,ಸಂಸ್ಕ್ರತಿ ಸಮಾಜದ ಒಂದು ಭಾಗವಾಗಿದೆ.ನಿರಂತರವಾಗಿ ಈ ಪರಂಪರೆ ಮುಂದುವರಿಯಬೇಕಿದೆ ಎಂದರು.
ವೇದಿಕೆಯಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಘುರಾಮ ಕೆ.ಪೂಜಾರಿ,ಮಾಜಿ ಅಧ್ಯಕ್ಷರಾದ ಹೆಚ್.ಸುಬ್ರಾಯ ನಾಯ್ಕ,ಸೋಮಪ್ಪ ಡಿ. ಬಿಲ್ಲವ.ಸದಸ್ಯರಾದ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತೆಂಕುತಿಟ್ಟಿನ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ,ನಿವೃತ್ತ ನ್ಯಾಯಾಧೀಶ ರವಿ ನಾಯ್ಕ ಭಟ್ಕಳ,ಅನ್ನದಾನದ ಹಾಗೂ ಯಕ್ಷಗಾನದ ಸೇವಾಕರ್ತರಾದ ಮಾಸ್ತಿಯಮ್ಮ ದಿ.ಹೊನ್ನ ನಾಯ್ಕ ಬಪ್ಪನಬೈಲು ಕುಟುಂಬದವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
News/Girish shiruru
pic/Smart studio shiruru