ಬೈಂದೂರು: ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆ ಶುಕ್ರವಾರ ನಡೆಯಿತು.ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಹೊರಟು ನಾಕಟ್ಟೆ ಮಾರ್ಗವಾಗಿ ಆಂಜನೇಯ ದೇವಸ್ಥಾನದವರೆಗೆ ಪಂಜಿನ ಮೆರವಣಗೆ ನಡೆಯಿತು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪ್ರಧಾನ ಭಾಷಣಕಾರರಾಗಿ ಹಾರಿಕಾ ಮಂಜುನಾಥ,ವಕೀಲ ವಿಶ್ವನಾಥ ಶೆಟ್ಟಿ ಗಂಟಿ ಹೊಳೆ, ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಸಂಯೋಜಕ ರಾಜೇಶ್ ಬೈಂದೂರು, ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ಉಮೇಶ ಸೂಡ,ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸದಸ್ಯ ವಾಸುದೇವ ಗಂಗೊಳ್ಳಿ ಹಾಗೂ ಹಿಂದೂ ಜಾಗರಣ ಕಾರ್ಯಕರ್ತರು ಹಾಜರಿದ್ದರು.

ಮಹೇಶ್ ವಸ್ರೆ ಪ್ರತಿಜ್ಞಾ ವಿಧಿ ಬೋಧಿಸಿದರು.ಅನೂಪ್ ಮೊಯ್ಲಿ ಬೈಂದೂರು ಸ್ವಾಗತಿಸಿದರು.ನಿರೂಪಣೆ ಶೋಧನ್ ಆಲೂರು ಕಾರ್ಯಕ್ರಮ ನಿರ್ವಹಿಸಿದರು.ಉಮೇಶ್ ಬಿಜೂರು ವಂದಿಸಿದರು.

 

 

Leave a Reply

Your email address will not be published.

fourteen + nine =