ಬೈಂದೂರು: ಗ್ರಾಮ ಅರಣ್ಯ ಸಮಿತಿ ಪಡುವರಿ ಬೈಂದೂರು ಇದರ ವತಿಯಿಂದ ಒತ್ತಿನೆಣೆ ಹೇನ್‌ಬೇರುವಿನಲ್ಲಿ ಮೂರು ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಬಸ್ ತಂಗುದಾಣವನ್ನು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸುರೇಶ್ ಬಟ್ವಾಡಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕರಿಗೆ ಅನೂಕೂಲವಾಗುವ ಯೋಜನೆಗಳು ಅನುಷ್ಠಾನವಾಗಬೇಕಾದರೆ ಅಧಿಕಾರಿಗಳ ಇಚ್ಚಾಶಕ್ತಿ ಮುಖ್ಯ.ಬಹುದಿನದ ಬೇಡಿಕೆ ಅರಿತು ತಂಗುದಾಣ ನಿರ್ಮಿಸಿದ ಅರಣ್ಯ ಇಲಾಖೆಯ ಯೋಜನೆ ಅತ್ಯುತ್ತಮವಾಗಿದೆ.ಈ ಭಾಗದಲ್ಲಿ ಗ್ರಾಮ ಅರಣ್ಯ ಇಲಾಖೆ ಸ್ಥಾಪಿಸಿದ ಬಸ್ ತಂಗುದಾಣ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.

ಈ ಸಂಧರ್ಭದಲ್ಲಿ ಬೈಂದೂರು ವಲಯ ಅರಣ್ಯಾಧಿಕಾರಿ ಸಿದ್ದೇಶ್,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಮಾಜಿ ಗ್ರಾ.ಪಂ ಸದಸ್ಯರಾದ ವೆಂಕಟರಮಣ ದೇವಾಡಿಗ ಹೇನ್‌ಬೇರು,ನರಸಿಂಹ ದೇವಾಡಿಗ,ಸಂಜಯ ಬೈಂದೂರು,ದಾರಮ್ಮ,ಸಂಸದರ ಆಪ್ತ ಕಾರ್ಯದರ್ಶಿ ಶಿವಕುಮಾರ್,ಗ್ರಾಮ ಅರಣ್ಯ ಸಮಿತಿ ಕಾರ್ಯದರ್ಶಿ ರವಿರಾಜ್,ಪಡುವರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸದಾಶಿವ ಡಿ.ಪಡುವರಿ,ಗಿರೀಶ್ ಬೈಂದೂರು,ಕಟ್ಟಡದ ಗುತ್ತಿಗೆದಾರ ಪ್ರಕಾಶ ದೇವಾಡಿಗ ಹೇನ್‌ಬೇರು,ಜಯಶ್ರೀ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.

ದಯಾನಂದ ಬೈಂದೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

News/pic: Giri shiruru

 

Leave a Reply

Your email address will not be published.

17 − six =