ಬೈಂದೂರು: ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ.ಪ್ರತಿಯೊಂದು ಅಭಿನಯದ ಜೊತೆಗೆ ಬದಲಾವಣೆಗೆ ಒಗ್ಗಿಕೊಂಡು ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಲಾವಣ್ಯದ ಹೆಗ್ಗಳಿಕೆಯಾಗಿದೆ ಎಂದು ಯು.ಬಿ ಶೆಟ್ಟಿ ಎಜ್ಯುಕೇಷನ್ ಟ್ರಸ್ಟ್‌ನ ಶೈಕ್ಷಣಿಕ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಹೇಳಿದರು ಅವರು ಲಾವಣ್ಯ (ರಿ.)ಬೈಂದೂರು ಇದರ 46ನೇ ವಾರ್ಷಿಕೋತ್ಸವ ರಂಗ ಪಂಚಮಿ -2023 ಐದು ದಿನಗಳ ನಾಟಕೋತ್ಸವ ಮತ್ತು ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಲಾವಣ್ಯದ ಅಧ್ಯಕ್ಷ ನರಸಿಂಹ ಬಿ.ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ-ಅಪರೇಟಿವ ಅಧ್ಯಕ್ಷ ಎಸ್.ರಾಜು ಪೂಜಾರಿ,ಚಂದ್ರ ದೇವಾಡಿಗ ಯಡ್ತರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಾವಣ್ಯದ ಸ್ಥಾಪಕಾಧ್ಯಕ್ಷ ಯು.ಶ್ರೀನಿವಾಸ ಪ್ರಭು ರವರನ್ನು ಸಮ್ಮಾನಿಸಲಾಯಿತು.ಅರೆಹೊಳೆ ಸದಾಶಿವ ರಾವ್ ಶುಭಶಂಸನೆಗೈದರು.ನಾಗರಾಜ ಯಡ್ತರೆ ಸ್ವಾಗತಿಸಿದರು.ಸುಬ್ರಹ್ಮಣ್ಯ ಜಿ.ಉಪ್ಪುಂದ ಹಾಗೂ ಮಂಜುನಾಥ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಂದಿಸಿದರು.
ಬಳಿಕ ಲಾವಣ್ಯ ಕಲಾವಿದರಿಂದ ನಾಯಿ ಕಳೆದಿದೆ ನಾಟಕ ಪ್ರದರ್ಶನಗೊಂಡಿತು.