ಬೈಂದೂರು: ಮೆನ್ ರೋಡ್ ಬ್ಯಾಡ್ಮಿಂಟನ್ ಕ್ಲಬ್ ಬೈಂದೂರು ಇವರ ಆಶ್ರಯದಲ್ಲಿ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಬೈಂದೂರು ವಿಧಾನಸಭಾ ವ್ಯಾಪ್ತಿಯ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಶೆಟಲ್ ಪಂದ್ಯಾಟದ ಸಮಾರೋಪ ಸಮಾರಂಭ ಶ್ರೀ ವೆಂಕಟರಮಣ ದೇವಸ್ಥಾನದ ವಠಾರ ಬೈಂದೂರಿನಲ್ಲಿ ನಡೆಯಿತು.ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ .ನಿ.ಕುಂದಾಪುರದ ಅಧ್ಯಕ್ಷ ಸಂತೋಷ ಶೆಟ್ಟಿ ವಿಜೇತ ತಂಡಗಳಿಗೆ ಬಹುಮಾನ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಶಿರೂರು ಮಹಾಸತಿ ಬ್ಯಾಡ್ಮಿಂಟನ್ ಕ್ಲಬ್ ಅಧ್ಯಕ್ಷ ಮೋಹನ್ ಪೂಜಾರಿ,ನ್ಯಾಷನಲ್ ಬೇಕರಿ ಮಾಲಕ ಗುರುಪ್ರಸಾದ ಪೂಜಾರಿ,ಹಿರಿಯ ಶಟಲ್ ಆಟಗಾರ ಜೋಸೆಫ್ ಫೆರ್ನಾಂಡೀಸ್,ಗುಂಡು ಬೈಂದೂರು ಹಾಗೂ ಎಮ್.ಆರ್.ಬಿ.ಸಿ ತಂಡದ ಸರ್ವ ಸದಸ್ಯರು ಹಾಜರಿದ್ದರು.

ಶಟಲ್ ಪಂದ್ಯಾಟದಲ್ಲಿ ನವೀನ್ ಕುಮಾರ್ ಹಾಗೂ ನಿಖಿಲ್ ಪ್ರಥಮ ಸ್ಥಾನ ಪಡೆದರು.ಸಂದೇಶ್ ಹಾಗೂ ಮುನ್ನಾ ದ್ವಿತೀಯ ಸ್ಥಾನ ಪಡೆದರು.ಸುಮಂತ್ ಹಾಗೂ ವಿಕ್ರಾಂತ್ ತೃತೀಯ ಸ್ಥಾನ ಪಡೆದರು.