ಬೈಂದೂರು: ಬೈಂದೂರಿನ ಪ್ರಸಿದ್ದ ಸಂಸ್ಥೆಗಳಲ್ಲೊಂದಾದ ಲಾವಣ್ಯ (ರಿ.)ಬೈಂದೂರು ಇದರ 46ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2023 ನಾಟಕೋತ್ಸವ ಮತ್ತು ಯಕ್ಷಗಾನ ಕಾರ್ಯಕ್ರಮ ಫೆ.20 ರಿಂದ 24 ರ ವರೆಗೆ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆಯಲಿದೆ.
ಫೆ.20 ರಂದು ಸಂಜೆ ಬೈಂದೂರು ಲಾವಣ್ಯ ಸಂಸ್ಥೆಯ 46ನೇ ವರ್ಷದ ನಾಟಕೋತ್ಸವ ಸಮಾರಂಭವನ್ನು ಯು.ಬಿ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು.ಬಿ ಶೆಟ್ಟಿ ಉದ್ಘಾಟಿಸಲಿದ್ದಾರೆ.ಬೈಂದೂರು ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಟ ಎಂ.ಕೆ ಮಠ ಶುಭಶಂಸನೆಗೈಯಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ. ಶಾಸಕ ಕೆ.ಗೋಪಾಲ ಪೂಜಾರಿ ಮುಂತಾದ ಗಣ್ಯರು ಆಗಮಿಸಲಿದ್ದಾರೆ.ಸಭಾ ಕಾರ್ಯಕ್ರಮದ ಬಳಿಕ ಲಾವಣ್ಯ (ರಿ.)ಬೈಂದೂರು ಇವರ ರಾಜೇಂದ್ರ ಕಾರಂತ್ ನಿರ್ದೇಶನದ ನಾಯಿ ಕಳೆದಿದೆ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.21 ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಎನ್.ಸಿ ಮಹೇಶ್ ನಿರ್ದೇಶನದ ಡ್ರಾಮಾಟ್ರಿಕ್ಸ್ ಬೆಂಗಳೂರು ಇವರಿಂದ ಬೀಚಿ ರಸಾಯನ ಪ್ರದರ್ಶನಗೊಳ್ಳಲಿದೆ.
ಫೆ.22 ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಶಿಕ್ಷಕರ ಬಳಗ ಉಡುಪಿ ಇವರಿಂದ ಬರ್ಬರಿಕಾ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.23 ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಲಾವಣ್ಯದ ಮಹಿಳಾ ಯಕ್ಷಗಾನ ಬಳಗದವರಿಂದ ವರಾನ್ವೇಷಣೆ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.24 ರಂದು ಸಂಜೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.ರಂಗಭೂಮಿ ಉಡುಪಿ ಇದರ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಶುಭಾಶಂಸನೆಗೈಯಲಿದ್ದಾರೆ.ಪ್ರತಿದಿನ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸಮ್ಮಾನ ಸಮಾರಂಭ ನಡೆಯಲಿದೆ.ಸಭಾ ಕಾರ್ಯಕ್ರಮದ ಬಳಿಕ ಅಮೋಘ ಹಿರಿಯಡಕ ಇವರಿಂದ ರೈಲು ಭೂತ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಬೈಂದೂರು ಲಾವಣ್ಯ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.