ಬೈಂದೂರು: ಮೆನ್ ರೋಡ್ ಬ್ಯಾಡ್ಮಿಂಟನ್ ಕ್ಲಬ್ ಬೈಂದೂರು ಇವರ ಆಶ್ರಯದಲ್ಲಿ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಬೈಂದೂರು ವಿಧಾನಸಭಾ ವ್ಯಾಪ್ತಿಯ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಶೆಟಲ್ ಪಂದ್ಯಾಟ ಎಮ್.ಆರ್.ಬಿ.ಸಿ ಟ್ರೋಪಿ -2023 ಶ್ರೀ ವೆಂಕಟರಮಣ ದೇವಸ್ಥಾನದ ವಠಾರ ಬೈಂದೂರಿನಲ್ಲಿ ನಡೆಯಿತು.
ಬೈಂದೂರು ಆರಕ್ಷಕ ಠಾಣೆಯ ಠಾಣಾಧಿಕಾರಿ ನಿರಂಜನ ಗೌಡ ಪಂದ್ಯಾಟವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟಗಳ ಯಶಸ್ಸಿಗೆ ಸಹಕರಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಒಂದು ಒಂದು ಕಲೆ ಅಡಗಿರುತ್ತದೆ. ಸಾಕಷ್ಟು ಜನ ಕ್ರೀಡಾಯಲ್ಲಿ ಆಸಕ್ತಿಯನ್ನು ಹೊಂದಿದ್ದು, ಜೀವನದಲ್ಲಿ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅಗತ್ಯ. ಎಲ್ಲಾ ವಯೋಮಾನದವರಿಗೂ ಕ್ರೀಡೆ ದೈಹಿಕ ಕ್ಷಮತೆಯನ್ನು ಕೊಡುತ್ತದೆ ಹಾಗೂ ಕ್ರೀಡೆಯ ಆಸಕ್ತಿ ಜೀವನಕ್ಕೆ ಚೈತನ್ಯ ನೀಡುತ್ತದೆ ಎಂದರು.
ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೇಮಲ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಲರಾಜ ಶರ್ಮ,ಗೌರವಾಧ್ಯಕ್ಷ ರಾಘವೇಂದ್ರ ದೇವಾಡಿಗ,ಉಪಾಧ್ಯಕ್ಷ ಅಯ್ಯಪ್ಪ ಬಿಲ್ಲವ, ಗುರುರಾಜ ಗಂಟಿಹೊಳೆ,ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ,ಬಂದೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಘು ನಾಯ್ಕ,ಉಪನ್ಯಾಸಕಿ ಮೀನಾಕ್ಷಿ,ಉದ್ಯಮಿ ನಾಗೇಶ ದೇವಾಡಿಗ,ಶಿವರಾಮ ಕೊಠಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಚಂದ್ರಶೇಖರ ನಾವಡ ರವರನ್ನು ಸಮ್ಮಾನಿಸಲಾಯಿತು.ಅನುಪ್ ಮೊಯ್ಲಿ ಸ್ವಾಗತಿಸಿದರು.ಪ್ರವೀಣ್ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.