ಬೈಂದೂರು: ರೋಟರಿ ಕ್ಲಬ್ ಬೈಂದೂರು ಹಾಗೂ ಇನ್ನರ್‌ವೀಲ್ ಕ್ಲಬ್ ಬೈಂದೂರು ಇದರ ಸಹಯೋಗದಲ್ಲಿ ಆಷಾಢದಲ್ಲೊಂದು ದಿನ ಕುಟುಂಬೋತ್ಸವ ಕಾರ್ಯಕ್ರಮ ರೋಟರಿ ಭವನ ಬೈಂದೂರಿನಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ನಿವೃತ್ತ ಮುಖ್ಯೋಪದ್ಯಾಯ ಆನಂದ ಮದ್ದೋಡಿ ನಮ್ಮ ನೆಲ,ಜಲ,ಸಂಸ್ಕ್ರತಿ ಆಚರಣೆಗಳೆಲ್ಲವೂ ಕೂಡ ಅರ್ಥಪೂರ್ಣವಾಗಿದೆ.ಪ್ರತಿ ಮಾಸವು ಅದರದ್ದೆ ಆದ ವಿಶೇಷತೆ ಹೊಂದಿದೆ.ಆಷಾಢ ಮಾಸ ಅತ್ಯಂತ ಹೆಚ್ಚು ಧಾರ್ಮಿಕ ಶ್ರೇಷ್ಟತೆ ಹೊಂದಿದೆ.ಈ ತಿಂಗಳ ಹಿನ್ನೆಲೆಯಲ್ಲಿ ಆಚರಣೆ ನಡೆದು ಬಂದಿದೆ.ಸಂಘ ಸಂಸ್ಥೆಗಳು ಕೇವಲ ಸಮಾಜದ ಚಿಂತನೆ ಮಾತ್ರವಲ್ಲದೆ ಸದಸ್ಯರ ಕುಟುಂಬ ಸಮ್ಮೀಲನ ಮೂಲಕ ಸದಸ್ಯರ ನಡುವೆ ಸದೃಡತೆಯ ಬಾಂಧವ್ಯ ಬೆಳೆಸುತ್ತದೆ ಎಂದರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಶ್ರೀಧರ ಉಪಸ್ಥಿತರಿದ್ದರು.

ಇನ್ನರ್‌ವೀಲ್ ಕ್ಲಬ್ ಸದಸ್ಯರು 25ಕ್ಕೂ ಅಧಿಕ ಆಷಾಢ ಖಾದ್ಯ ಸಿದ್ದಪಡಿಸಿದರು.ಆಷಾಢ ವಿಶೇಷತೆ, ಹಾಡು, ಮನರಂಜನೆ ಮೂಲಕ ಆಚರಿಸಲಾಯಿತು. ಇನ್ನರ್‌ವೀಲ್ ಕ್ಲಬ್ ಕಾರ್ಯದರ್ಶಿ ವಿದ್ಯಾ ಅಶೋಕ ಶೇಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ರೋಟರಿ ಕ್ಲಬ್ ಕಾರ್ಯದರ್ಶಿ ಮಣಿಕಂಠ ದೇವಾಡಿಗ ವಂದಿಸಿದರು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

three × 5 =