ಬೈಂದೂರು: ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿಧಿ೯ಷ್ಟಾವಧಿ ಧರಣಿ ಒಂದು ವರ್ಷ ಪೂರೈಸಿದೆ.ಸತತ ಹೋರಾಟ ನಡೆಸುತ್ತಿದ್ದರು ಕೂಡ ವಿಳಂಬವಾಗುತ್ತಿರುವ ಕುರಿತು ಆಕ್ರೋಶಗೊಂಡ ರೈತರು ಆ.07 ರಂದು ಮಾಡು ಇಲ್ಲವೆ ಮಡಿ ಸಿದ್ದಾಂತದಲ್ಲಿ ಬ್ರಹತ್ ಹೋರಾಟಕ್ಕೆ ಕರೆಕೊಟ್ಟಿದ್ದು ಸಾವಿರಾರು ಸಂಖ್ಯೆಯಲ್ಲಿ ರೈತರು ಬೈಂದೂರಿನಲ್ಲಿ ಜಮಾಯಿಸಿ ಇತಿಹಾಸ ನಿರ್ಮಿಸಿದ್ದರು.ಮಾತ್ರವಲ್ಲದೆ ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಸ್ವತಃ ಜಿಲ್ಲಾಧಿಕಾರಿಗಳು ಬೈಂದೂರಿಗೆ ಆಗಮಿಸಿ ರೈತರ ಜೊತೆ ಮಾತುಕತೆ ನಡೆಸಿ ನ್ಯಾಯ ನೀಡುವ ಭರವಸೆ ನೀಡಿದ್ದರು.ಆದರೆ ಬೈಂದೂರು ಶಾಸಕರು ಮಾತ್ರ ಕ್ಷೇತ್ರದ ಇಷ್ಟೊಂದು ದೊಡ್ಡ ಹೋರಾಟಕ್ಕೆ ಆಗಮಿಸಲಿಲ್ಲ.ಕ್ಷೇತ್ರದಲ್ಲಿದ್ದರು ಕೂಡ ರೈತರ ನೋವಿಗೆ ಸ್ಪಂಧಿಸದಿರುವುದು ಮತ್ತು ಶಾಸಕರ ಈ ನಡೆಗೆ ರೈತರು ವ್ಯಾಪಕ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ನಡೆಗೆ ರೈತರ ಆಕ್ರೋಶ: ಬೈಂದೂರು ಕ್ಷೇತ್ರದ ಶಾಸಕರು ಕೇವಲ ಪಟ್ಟಣ ಪ್ರದೇಶದ ಮತಗಳಿಂದ ಮಾತ್ರ ಗೆದ್ದಿಲ್ಲ. ಸಾವಿರಾರು ಹಳ್ಳಿ ಭಾಗದ ಜನರು ಕೂಡ ಮತ ನೀಡಿದ್ದಾರೆ.ರೈತ ಹೋರಾಟ ನೂರಕ್ಕೆ ನೂರು ನ್ಯಾಯಯುತವಾಗಿದೆ.ರಾಜಕೀಯ ಮತ್ತು ವಯಕ್ತಿಕ ಎನೆ ಇದ್ದರು ಕೂಡ ಕ್ಷೇತ್ರದ ಸಾವಿರಾರು ಹಳ್ಳಿಭಾಗದ ಜನರು ಇಷ್ಟೊಂದು ಬ್ರಹತ್ ಪ್ರತಿಭಟನೆ ಮಾಡುತ್ತಿದ್ದರು ರೈತರನ್ನು ನಿರ್ಲಕ್ಷಿಸಿ ಬಾರದೆ ಇರುವುದು ಶಾಸಕರ ಅಧಿಕಾರದ ಆಹಂಕಾರವಾಗಿದೆ.ಇದು ರೈತರಿಗೆ ಮಾಡಿದ ಅವಮಾನ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾತ್ರವಲ್ಲದೆ ದಿಕ್ಕಾರ ಘೋಷಣೆ ಕೂಗಿದ್ದಾರೆ.ಮರಳು ಮಾಫಿಯಾ, ಉತ್ಸವ ಸೇರಿದಂತೆ ಲಾಭದ ಕಡೆಗಳಲ್ಲಿ ಕಾಂಗ್ರೆಸ್ – ಬಿಜೆಪಿ ಮಾತ್ರ ನಡೆಯುತ್ತೆ. ರೈತರ ವಿಷಯದಲ್ಲಿ ಮಾತ್ರ ಇಲ್ಲವಾಗಿದೆ.
ಒಂದು ವರ್ಷ ಹೋರಾಟ ಮಾಡಿದರು ಸಹ ಬೈಂದೂರು ಶಾಸಕರು ಕನಿಷ್ಟ ಪಕ್ಷ ರೈತ ಮುಖಂಡರ ಸಭೆ ನಡೆಸಿ ಸರಕಾರದ ಮಟ್ಟದಲ್ಲಿ ಸ್ಪಂಧಿಸುವ ಕೆಲಸ ಮಾಡಿಲ್ಲ. ಮಾತ್ರವಲ್ಲದೆ ಸಾಧ್ಯವಾದ ಕಡೆಗಳಲ್ಲೆಲ್ಲಾ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ.ಅದರೆ ಜೊತೆಗೆ ಶಾಸಕರ ಆಪ್ತ ರೈತರು ಹೋರಾಟ ನಡೆಸುತ್ತಿದ್ದರು ಸಹ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಚುನಾವಣೆ ನಡೆಸುವ ಪ್ರಯತ್ನ ಮಾಡಿದ್ದಾರೆ.ಹೀಗಾಗಿ ಶಾಸಕರ ರೈತ ವಿರೋಧಿ ನಡೆ ಸರಿಯಲ್ಲ ಎನ್ನುವುದು ಗ್ರಾಮೀಣ ಭಾಗದ ರೈತರ ಅಭಿಪ್ರಾಯವಾಗಿದೆ.

ಮಾಜಿ ಸಚಿವರಾದ ಜಯಪ್ರಕಾಶ ಹೆಗ್ಡೆ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಅರವಿಂದ ಪೂಜಾರಿ ಮುಂತಾದವರು ಬೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದರು.ರಾಜಕೀಯ ಅಥವಾ ವಯಕ್ತಿಕಗಳೇನೆ ಇದ್ದರು ಬೈಂದೂರು ಗ್ರಾಮೀಣ ಭಾಗದ ರೈತರು ಬದುಕಿಗಾಗಿ ನಡೆಸಿದ ಬ್ರಹತ್ ಹೋರಾಟದಲ್ಲಿ ಶಾಸಕರು ಗೈರಾಗಿರುವುದೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಮತ್ತು ಬೈಂದೂರು ಶಾಸಕರನ್ನು ಹುಡುಕಿಕೊಡಿ ಎಂದು ಪ್ರತಿಭಟನೆ ನಿರತ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ವರದಿ/ಶಿರೂರು ಡಾಟ್ ಕಾಮ್