ಬೈಂದೂರು: ಜಿಲ್ಲಾಡಳಿತ ಮತ್ತು ಸರಕಾರದಿಂದ ಸ್ಪಷ್ಟತೆ ದೊರೆಯದೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಶುಕ್ರವಾರ ಹೆದ್ದಾರಿ ತಡೆಗೆ ಮುಂದಾದರು.ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸದಿದ್ದರೆ ಯಾವುದೆ ಕಾರಣಕ್ಕೂ ರೈತರು ಹಿಂದಿರುಗುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಬಳಿಕ ಜಿಲ್ಲಾಧಿಕಾರಿಗಳು ಆಗಮಿಸಿ ರೈತ ಮುಖಂಡರ ಸಭೆ ನಡೆಸಿ ರೈತರ ಜೊತೆ ಮಾತನಾಡಿದರು.ಮತ್ತು ಸರಕಾರಕ್ಕೆ ಜಿಲ್ಲಾಡಳಿತದಿಂದ ರೈತರ ಪೂರಕವಾಗಿ ಮಾಹಿತಿ ಕಳುಹಿಸಲಾಗಿದೆ ಮತ್ತು ನಗರಾಭಿವೃದ್ದಿ ಹಾಗೂ ಸಂಬಂಧಪಟ್ಟ ಇಲಾಖೆಯ ಮುಖ್ಯಕಾರ್ಯದರ್ಶಿ ಜೊತೆ ಮಾತನಾಡುತ್ತೇನೆ ಶೀಘ್ರ ರೈತರಿಗೆ ನ್ಯಾಯ ದೊರಕಿಸಿಕೊಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಸ್ಪಷ್ಟತೆ ದೊರೆತ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ,ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಹೆಚ್ಚುವರಿ ಪೊಲಸ್ ವರಿಷ್ಠಾಧಿಕಾರಿ ಸುಧಾಕರ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ತಹಶೀಲ್ದಾರ ರವಿರಾಜ್ ದೀಕ್ಷಿತ್,ಪಟ್ಟಣ ಪಂಚಾಯತ್ ಅಧಿಕಾರಿ ಅಜಯ್ ಭಂಡಾರ್ಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ,ವಿವಿಧ ಅಧಿಕಾರಿಗಳು,ಅರುಣ್ ಕುಮಾರ್ ಶಿರೂರು,ವೀರಭದ್ರ ಗಾಣಿಗ,ಪದ್ಮಾಕ್ಷ ಗೋಳಿಬೇರು,ಗಣಪ ಗಂಗನಾಡು,ಸುಭಾಷ್ ಗಂಗನಾಡು,ಹೆರಿಯ ಪೂಜಾರಿ ಗೋಳಿಬೇರು,ನಾಗಪ್ಪ ಮರಾಠಿ ಹೊಸೂರು,ವಾಸುದೇವ ಮರಾಠಿ,ಕೇಶವ ಅಂತಾರ್,ಮಹಾದೇವ ಪೂಜಾರಿ ಕಿಸ್ಮತಿ,ಲಿಮೋನ್ ಅತ್ಯಾಡಿ ಹಾಗೂ ರೈತ ಮುಖಂಡರು ಹಾಜರಿದ್ದರು.

ವರದಿ/ಚಿತ್ರ: ಗಿರಿ ಶಿರೂರು

 

Leave a Reply

Your email address will not be published. Required fields are marked *

13 − nine =