ಬೈಂದೂರು: ಕ್ರೀಡೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ.ಕಬಡ್ಡಿ ಅಪ್ಪಟ ದೇಶಿಯ ಕ್ರೀಡೆಯಾಗಿದೆ.ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವುದು ಅತ್ಯಂತ ಸಂತೋಷಕರ ವಿಚಾರವಾಗಿದೆ. ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಜಾಗತಿಕ ಮನ್ನಣೆಗಳಿಸಿಕೊಂಡಿದೆ.ಕಠಿಣ ಪರಿಶ್ರಮ ಮತ್ತು ಆಸಕ್ತಿ ಪ್ರತಿಯೊಬ್ಬರನ್ನು ಯಶಸ್ಸಿನತ್ತ ಕೊಂಡೊಯುತ್ತದೆ.ಕ್ರೀಡೆಯ ಮೂಲಕ ಸಂಘಟನೆ ಮತ್ತು ಸಾಮರಸ್ಯ ಮೂಡಿಸುವುದು.ಊರಿನ ಅಭಿವೃದ್ದಿಯ ಜೊತೆಗೆ ಉತ್ತಮ ಬೆಳವಣೆಗೆ ಎಂದು ಬೈಂದೂರು ವಲಯ ಮರಾಠಿ ಸಮಾಜ ಸುಧಾರಕರ ಸಂಘದ ನಿರ್ದೇಶಕ ನಾಗಪ್ಪ ಮರಾಠಿ ಹೊಸೂರು ಹೇಳಿದರು ಅವರು ಶ್ರೀ ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಹಾಗೂ ಬೈಂದೂರು ತಾಲೂಕು ಅಮೇಚೂರ್ ಕಬಡ್ಡಿ ಅಸೋಶಿಯೇಷನ್ ಇವರ ಜಂಟಿ ಆಶ್ರಯದಲ್ಲಿ ಹೊಸೂರಿನಲ್ಲಿ ನಡೆದ ಚತುರ್ಥ ವರ್ಷದ ಮರಾಠಿ ಬಾಂಧವರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್.ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕ್ರೀಡಾಂಗಣವನ್ನು ಉದ್ಘಾಟಿಸಿದರು. ನಾಗರಾಜ ಶಿವು ಮರಾಠಿ ಹೊಸೂರು ಟ್ರೋಪಿ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಊರಿನ ಹಿರಿಯ ಗುರಿಕಾರರಾದ ಶೇಷ ಮರಾಠಿ ಹೊಸೂರು,ಸಿ.ಆರ್.ಪಿ ಶಿಕ್ಷಕ ರಾಮನಾಥ ಮೇಸ್ತ,ತಿಮ್ಮ ಮರಾಠಿ ಹೊಸಸೂರು,ಮಂಜುನಾಥ ಮರಾಠಿ,ಪದ್ಮಾಕ್ಷ ಗೋಳಿಬೇರು,ಮಾಸ್ತಯ್ಯ ಪೂಜಾರಿ,ರಾಜು ಮರಾಠಿ,ನಾಗರಾಜ ಡಿ.ಮರಾಠಿ,ಬೈಂದೂರು ವಲಯ ಮರಾಠಿ ಸಮಾಜ ಸುಧಾರಕರ ಸಂಘದ ಕಾರ್ಯದರ್ಶಿ ರಾಜು ಆಲಗದ್ದೆ,ಸಂಚಲನ ಹೊಸೂರು ಅಧ್ಯಕ್ಷ ನಾರಾಯಣ ಮರಾಠಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಮರಾಠಿ ಉಪಸ್ಥಿತರಿದ್ದರು.

ಆಯೋಜಕ ವಾಸುದೇವ ಮರಾಠಿ ಹೊಸೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.ರಾಜು ಮರಾಠಿ ವಂದಿಸಿದರು.
ಕಬಡ್ಡಿ ಪಂದ್ಯಾಟದಲ್ಲಿ ಯು.ಎನ್.ಬಿ ಬಂಗಣಿ ಪ್ರಥಮ ಹಾಗೂ ಶ್ರೀ ದುರ್ಗಾಪರಮೇಶ್ವರಿ ವಾರಿಯರ್‍ಸ್ ಹೊಸೂರು ದ್ವಿತೀಯ ಸ್ಥಾನ ಪಡೆದರು.
ವರದಿ/ಗಿರಿ ಶಿರೂರು
ಚಿತ್ರ:ಕೃಷ್ಣ ಸ್ಮಾರ್ಟ್ ಸ್ಟುಡಿಯೋ ಶಿರೂರು