ಬೈಂದೂರು,ಎ.7; ಭೂಮಿ ಕೊಟ್ಟವರು,ನೆರಳು ಕೊಟ್ಟವರು ,ಆಶ್ರಯ ಕೊಟ್ಟವರನ್ನು ಯಾವತ್ತು ಮರೆಯಬಾರದು.ಧಾನ ಧರ್ಮದಿಂದ ಪುಣ್ಯ ಪ್ರಾಪ್ತಿ ದೊರೆಯುತ್ತದೆ.ಗುರುಬಲ ಇದ್ದಾಗ ದೈವ ಬಲ ತಾನಾಗಿ ಬರುತ್ತದೆ.ನೆರಳು ಕೊಟ್ಟವರನ್ನು ದೇವರಂತೆ ಪೂಜೆ ಮಾಡಿ.ತಂದೆ ತಾಯಿ ಸೇವೆ ಮಾಡಿದಾಗ ಪುಣ್ಯಪ್ರಾಪ್ತಿಯಾಗುತ್ತದೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಗೋವಿಂದ ಬಾಬು ಪೂಜಾರಿ ಇವರು ತಮ್ಮ ಸತ್ಕಾರ್ಯಗಳ ಮೂಲಕ ಶ್ರೇಷ್ಠ ದಾನವರಲ್ಲಿ ಒಬ್ಬರಾಗಿದ್ದಾರೆ. ಬಡವರ ಕಷ್ಟಕ್ಕೆ ಸ್ಪಂಧಿಸುವ ಹೃದಯಗಳಿಗೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಸಾವಿರಕ್ಕೂ ಅಧಿಕ ಮನೆ ನಿರ್ಮಾಣ ಮಾಡುವ ಭಾಗ್ಯ ಭಗವಂತ ಇವರಿಗೆ ಕರುಣಿಸಲಿ ಎಂದು ಶ್ರೀ ಜಾತವೇದ ಸುಕ್ಷೇಮಾಲಯ ಶ್ರೀ ದೂರ್ವಾಸಕ್ಷೇತ್ರ ಶಿವಮೊಗ್ಗದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪಲ್ಲಕ್ಕಿ ನಾರಾಯಣ ಸ್ವಾಮೀಜಿ ಹೇಳಿದರು ಅವರು ಮಂಗಳವಾರ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಇದರ ವತಿಯಿಂದ ಕಾವ್ರಾಡಿ ಗ್ರಾಮದ ಸಾರ್ಕಲ್ಲು ಗೌರಿ ದೇವಾಡಿಗ ಇವರಿಗೆ ನೂತನವಾಗಿ ನಿರ್ಮಿಸಿಕೊಟ್ಟಿರುವ 20ನೇ ಮನೆ ಪ್ರವೇಶೋತ್ಸವ ಹಾಗೂ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ನೂತನವಾಗಿ ನಿರ್ಮಾಣಗೊಂಡ 20ನೇ ಮನೆಯ ಕೀ ಹಸ್ತಾಂತರಿಸಿ ಮಾತನಾಡಿ ಟ್ರಸ್ಟ್ ಮೂಲಕ ನಿರ್ಮಿಸಲಾಗಿರುವ 20ನೇ ಮನೆ ಇದಾಗಿದ್ದು 21ನೇ ಮನೆಯ ಉದ್ಘಾಟನೆ ಮರವಂತೆಯಲ್ಲಿ ನಡೆಯಲಿದ್ದು ಕಳೆದ ನಾಲ್ಕು ವರ್ಷದಲ್ಲಿ 20 ಮನೆಗಳು ನಿರ್ಮಾಣ ಮಾಡಿದ್ದು ಮತ್ತಷ್ಟುಕಾರ್ಯಗಳು ಟ್ರಸ್ಟ್ ಮೂಲಕ ನಡೆಯಲಿದ್ದು ಈಗಾಗಲೇ ಬೈಂದೂರು ವ್ಯಾಪ್ತಿಯಲ್ಲಿ ಟ್ರಸ್ಟ್ ಹಾಗೂ ವಯಕ್ತಿಕ ನೆಲೆಯಲ್ಲಿ ಅನೇಕ ಮನೆ ನಿರ್ಮಾಣ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದರು.











ಮುಖ್ಯ ಅತಿಥಿಗಳಾಗಿ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ್,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಘುರಾಮ ದೇವಾಡಿಗ,ಮಾಜಿ ಜಿ.ಪಂ ಸದಸ್ಯರು ಹಾಗೂ ಉದ್ಯಮಿ ಕಿಶನ್ ಹೆಗ್ಡೆ,ಹಿರಿಯರಾದ ಮುಂಬಾರು ದಿನಕರ ಶೆಟ್ಟಿಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನೆಯ ಯಜಮಾನರಾದ ಗೌರಿ ದೇವಾಡಿಗ ಕುಟುಂಬದವರಿಗೆ ಮನೆಯ ಕೀ ಹಸ್ತಾಂತರಿಸಲಾಯಿತು ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಯವರನ್ನು ಊರಿನ ಗ್ರಾಮಸ್ಥರ ವತಿಯಿಂದ ಸಮ್ಮಾನಿಸಲಾಯಿತು.




ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಬೈಂದೂರು ಶಾಖೆಯ ವ್ಯವಸ್ಥಾಪಕ ನಾಗರಾಜ ಪಿ.ಯಡ್ತರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.ಸುಶಾಂತ ಆಚಾರ್ಯ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು