ಬೈಂದೂರು,ಜು.17; ರೋಟರಿ ಕ್ಲಬ್ ಬೈಂದೂರು ಇದರ ಸಹಯೋಗದಲ್ಲಿ ಬೈಂದೂರು ಸೇವಾ ಸಂಗಮ ಶಿಶು ಮಂದಿರದ ಮಕ್ಕಳಿಗೆ ಆಟಿಕೆ ಹಾಗೂ ಕಲಿಕಾ ಸಾಮಗ್ರಿಯನ್ನು ವಿತರಿಸಲಾಯಿತು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದರು.
ಮಾಜಿ ಸಹಾಯಕ ಗವರ್ನರ್ ಐ. ನಾರಾಯಣ,ಕಾರ್ಯದರ್ಶಿ ಮಣಿಕಂಠ ಬೈಂದೂರು, ಸದಸ್ಯನಾರಾಯಣ ದೇವಾಡಿಗ,ಬೈಂದೂರು ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ,ಸೇವಾ ಸಂಗಮದ ಕಾರ್ಯದರ್ಶಿ ರಾಜೇಶ್ ಐತಾಳ್,ರವೀಂದ್ರ ಶ್ಯಾನುಭಾಗ್ ಹಾಗೂ ಸೇವಾ ಸಂಗಮದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

3 × four =