ಬೈಂದೂರು: ತಾಲೂಕು ಆಡಳಿತ ಸೌಧ ಬೈಂದೂರಿನಲ್ಲಿ 135ನೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಬೈಂದೂರು ತಹಶೀಲ್ದಾರ ಡಿ ಜಿ ಮಹತ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಗ್ರೇಡ ಟು ತಹಸೀಲ್ದಾರ್ ರಾಮಚಂದ್ರಪ್ಪ, ಉಪ ತಹಸೀಲ್ದಾರ್ ಲತಾ ಎಸ್ ಶೆಟ್ಟಿ ,ಗಿರಿಜಾ ಮೊಗೇರ. ಆಹಾರ ನಿರೀಕ್ಷಕ ವಿನಯ ಕುಮಾರ, ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.