ಶಿರೂರು: ಶಿರೂರು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ನಿರ್ಮಾಣದ ಶಿಲಾಮಯ ರಾಜಗೋಪುರವು ಎ.19ರಂದು ಶ್ರೀ ಅಧೋಕ್ಷಜ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಎ.18 ರಂದು ಬೆಳಿಗ್ಗೆ ವೇದಮೂರ್ತಿ ವಿಶ್ವೇಶ್ವರ ಭಟ್ ಕತ್ಕಾಲ ಇವರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕ ರವೀಂದ್ರ ಆಯ್ಯಂಗಾರ ಇವರ ಸಹಯೋಗದೊಂದಿಗೆ ಶ್ರೀ ದೇವತಾ ಪ್ರಾರ್ಥನೆ, ಫಲನ್ಯಾಸ, ಪಂಚಗವ್ಯ ಪ್ರೋಕ್ಷಣೆ, ಶುದ್ಧಿಕರ್ಮ, ಗುರುಗಣೇಶ ಪೂಜಾ. ಮಹಾಸಂಕಲ್ಪ, ಪುಣ್ಯಾಹ, ಮಾತೃಕಾ ಪೂಜಾ, ದೇವನಾಂದಿ, ಕೌತುಕ ಪೂಜೆ, ಋತ್ವಿಕ್ಷರಣ, ಮಧುಪರ್ಕ, ಕೃಷ್ಣಾಚರಣೆ, ಶ್ರೀ ಮಹಾಗಣಪತಿ ಹೋಮ ಶಿಖರ ಶುದ್ದೀಕರಣ ಜರುಗಲಿದೆ. ಸಾಯಂಕಾಲ ಗಣಪತಿ ಪೂಜಾ, ರಾಜಗೋಪುರ ಪ್ರತಿಗ್ರಹಣ, ಗೋಪೂಜಾ, ಶಿಲ್ಪಿ ಪೂಜನಾ, ಸಪ್ತಶುದ್ದಿ, ಸಗ್ರಹ ಪೂರ್ವಕ ರಾಶೋಘ್ನ ಹೋಮ, ವಾಸ್ತು ಶಾಂತಿ, ಕಲಶಸ್ಥಾಪನೆ, ವಾಸ್ತುಬಲಿ, ದಿಗಲಿ ನಂತರ ಭಜನಾ ಸಂಕೀರ್ತನೆ ನಡೆಯಲಿದೆ.

ಎ.19ರಂದು ಬೆಳಿಗ್ಗೆ 7-28ಕ್ಕೆ ಸಲ್ಲುವ ಮೇಷಲಗ್ನ ಸಮೂರ್ಹದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶಿಲಾಮಯ ರಾಜಗೋಪುರದ ಶಿಖರ ಪ್ರತಿಷ್ಠೆ, ಗುರುಗಣೇಶ ಪೂಜಾ, ಪುಣ್ಯಾಹ, ಸ್ಥಾನಶುದ್ದಿ ಹೋಮ, ಬಿಂಬಶುದ್ದಿ ಹೋಮ, ಶಿಖರ ಅಧಿವಾಸ ಹೋಮ, ಮೂಲಮಂತ್ರ ಹೋಮ, ಮೂಹೂರ್ತವಾಚನ, ಶಕ್ತಿ-ತತ್ವ ಕಲಾವೃದ್ಧಿ ಹೋಮ. ಶ್ರೀ ಮಹಾವಿಷ್ಣು ಯಾಗ, ಶಾಂತಿ ಪ್ರಾಯಾಶ್ಚಿತ್ತ ಹೋಮಗಳು, ಮಹಾ ಪೂರ್ಣಾಹುತಿ, ಕುಂಭಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಶಿರೂರು ಕೆಳಪೇಟೆಯಿಂದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಸ್ವಾಗತಿಸಿ  ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆಯಲ್ಲಿ ದೇವಳಕ್ಕೆ ಬರಮಾಡಿಕೊಳ್ಳಲಾಗುವುದು.

 ಸಂಜೆ 4 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಪೂಜ್ಯ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಉಡುಪಿ ಶ್ರೀ ಆನಂತೇಶ್ವರ ದೇವಸ್ಥಾನದ ಅರ್ಚಕ ವೇದವ್ಯಾಸ ಐತಾಳ ಸಗ್ರಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಗುರುರಾಜ ಗಂಟಿಹೊಳೆ ಮಾಜಿ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಕೆ. ಗೋಪಾಲ ಪೂಜಾರಿ ಮೊದಲಾದ ಗಣ್ಯರು ಉಪಸ್ಥಿತರಿರಲಿದ್ದಾರೆ.

ರಾತ್ರಿ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತಸರ ಎಸ್.ನಾಗಯ್ಯ ಶೆಟ್ಟಿ ಹೊಸ್ಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

4 × four =