ಶಿರೂರು: ಮಾನವ ಜೀವನದಲ್ಲಿ ಎಷ್ಟೆ ಅಭಿವೃದ್ದಿ ಸಾಧಿಸಿದ್ದೇನೆಂದರು ಭಗವಂತನ ಲೀಲೆಯ ಮುಂದೆ ನಗಣ್ಯ.ಈ ಜಗತ್ತಿನ ಪ್ರತಿ ಕಾರ್ಯಗಳು ಭಗವಂತನ ಸೃಷ್ಟಿಯಾಗಿದೆ.ದೇವಾಲಯಗಳ ಅಭಿವೃದ್ದಿ ಊರಿನ ಪ್ರಗತಿಯ ಸಂಕೇತವಾಗಿದೆ.ಪರಮಾತ್ಮನ ನಾಮಸ್ಮರಣೆ ಪ್ರತಿಯೊಬ್ಬರ ಬದುಕಿಗೆ ಚೈತನ್ಯ ನೀಡುತ್ತದೆ ಎಂದು  ಬಾಳೆಕುದ್ರು ಹಂಗಾರಕಟ್ಟೆ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ  ಶ್ರೀ  ವಾಸುದೇವ ಸದಾಶಿವಾಶ್ರಮ ಮಹಾಸ್ವಾಮಿ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಶ್ರೀಪಾದಂಗಳ ಹೇಳಿದರು ಅವರು ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶ್ರೀ ಮಾತಾ ಅಮೃತಾನಂದಮಯಿ ಆಶ್ರಮ ಬೋಳೂರು ಮಂಗಳೂರು ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಆಶೀರ್ವಚನ ನೀಡಿದ ಅವರು ಕಡಲ ತಡಿಯ ಜನರು ಅನಾದಿ ಕಾಲದಿಂದಲೂ ದೈವ ದೇವರುಗಳ ಬಗ್ಗೆ ಅಪಾರವಾದ ನಂಬಿಕೆ ಉಳ್ಳವರು.ದೇವರ ಕೃಪೆ ಇದ್ದಾಗ ಮಾತ್ರ ಜಗತ್ತು ಸುಭೀಕ್ಷವಾಗಿರುತ್ತದೆ.ದೇವತಾ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಭಗವಂತ ನೀಡಿದ ಸುಯೋಗ ಎಂದರು.

ಸಾಮರಸ್ಯ ಬೆಸೆದ ಸಭಾ ಕಾರ್ಯಕ್ರಮ: ಅಳ್ವೆಗದ್ದೆ  ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಶಿಲಾಮಯ,ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಅಚ್ಚುಕಟ್ಟಿನ ವ್ಯವಸ್ಥೆಯ ಜೊತೆಗೆ ಸಾಮರಸ್ಯದ ಸಂದೇಶ ಸಾರಿದ ಧಾರ್ಮಿಕ ಕಾರ್ಯಕ್ರಮವಾಗಿ ಮೂಡಿಬಂದಿದೆ.ಮೀನುಗಾರಿಕೆ ಈ ಭಾಗದ ಜನರ ಕುಲಕಸುಬಾಗಿರುವ ಕಾರಣ ಹಿಂದಿನಿಂದಲೂ ಹಿಂದೂ -ಮುಸ್ಲಿಂ ಬಾಂಧವರ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆಳೆದಿದ್ದು ಹೊರೆಕಾಣಿಕೆ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಯುವಕರು ನೀರು ತಂಪು ಪಾನೀಯ ನೀಡಿ ಸೌಹಾರ್ಧತೆ ಮೆರೆದಿದ್ದರು.ಇಂದಿನ ಸಭಾ ಕಾರ್ಯಕ್ರಮದಲ್ಲಿ ಕೆಸರಕೋಡಿ ಜಮಾತ್ ಸದಸ್ಯರು ಸ್ವಾಮೀಜಿಗಳಿಗೆ ಗೌರವಿಸಿ ಪಾದಪೂಜೆ ನಡೆಸುವ ಮೂಲಕ ಪರಸ್ಪರ ಸಾಮರಸ್ಯದ ಸಂದೇಶ ನೀಡಿದ್ದು ಶಿರೂರಿನ ಸೌಹಾರ್ಧತೆಯ ಹಿರಿಮೆ ಹೆಚ್ಚಿಸಿ ಮಾದರಿಯಾಗಿದೆ.

ರಾಮ ಎನ್.ಅಳ್ವೆಗದ್ದೆ ಅಧ್ಯಕ್ಷರು ಜೀರ್ಣೋದ್ದಾರ ಸಮಿತಿ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ, ದೇವಳದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ ಕೆ.ದೊಡ್ಮನೆ, ಅಳ್ವೆಗದ್ದೆ, ಗೌರವಾಧ್ಯಕ್ಷ ನಾರಾಯಣ ಟಿ. ಅಳ್ವೆಗದ್ದೆ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣಪತಿ ಎಸ್. ಮೊಗವೀರ, ಪೂರ್ವಾಧ್ಯಕ್ಷ ನಾರಾಯಣ ಮಾಸ್ತಿ ಅಕ್ಷಯ ಶ್ರೀನಿವಾಸ, ಸಹಾಯಕ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ.,ದಾಸನಾಡಿ ವೆಂಕಟರಮಣ ದೇವಳದ ಆಡಳಿತ ಧರ್ಮದರ್ಶಿ ಎಸ್. ನಾಗಯ್ಯ ಶೆಟ್ಟಿ ಹೊಸ್ಮನೆ, ಮಾರಣಕಟ್ಟೆ ದೇವಳದ ಆಡಳಿತ ಧರ್ಮದರ್ಶಿ ಸದಾಶಿವ ಶೆಟ್ಟಿ, ಸುಭಾಶ್ಚಂದ್ರ, ತಿಮ್ಮಪ್ಪ ಹೊನ್ನಿಮನೆ ಭಟ್ಕಳ, ಅಣ್ಣಪ್ಪ ಮೊಗೇರ ಭಟ್ಕಳ, ಸತೀಶ ಅಮೀನ್ ಬಾರ್‍ಕೂರು,ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಜಿ.ಕಸ್ಟಂ ಪಡುವರಿ, ಉದ್ಯಮಿ ರಘುರಾಮ ಕೆ. ಪೂಜಾರಿ ಶಿರೂರು, ಪಿಡಿಒ ರಾಜೇಶ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಇದ್ದರು.

ಶ್ರದ್ಧಾ ಮೊಗೇರ್ ಸ್ವಾಗತಿಸಿ, ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ಪಾಂಡುರಂಗ ಮೊಗೇರ್ ವಂದಿಸಿದರು.

News/pic: Giri Shiruru

 

 

 

 

Leave a Reply

Your email address will not be published. Required fields are marked *

four + sixteen =