ಬೈಂದೂರು; ಸಹಕಾರಿ ಕ್ಷೇತ್ರದಲ್ಲಿ ರಾಜು ಪೂಜಾರಿಯವರ ಕೊಡುಗೆ ಅಪಾರವಾಗಿದೆ.ಪ್ರತಿ ಕ್ಷೇತ್ರದಲ್ಲೂ ಅತ್ಯತ್ತಮ ವಿಶೇಷತೆ ಮೂಲಕ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ.ಶ್ರೀರಾಮ ಸೌಹಾರ್ಧ ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಪ್ರೀತಿಗಳಿಸಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಮಾದರಿ ಸಂಸ್ಥೆಯಾಗಿದೆ.ಪ್ರಸ್ತುತ ಉಪ್ಪುಂದದಲ್ಲಿ 7ನೇ ನೂತನ ಶಾಖೆಯನ್ನು ಆರಂಭಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗಕ್ಕೆ ಇನ್ನಷ್ಟು ಆರ್ಥಿಕ ಸಹಕಾರ ದೊರೆಯುವಂತಾಗಲಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಭಾನುವಾರ ಬ್ರಾಹ್ಮಿ ಸಿಟಿ ಸೆಂಟರ್ ಶಾಲೆಬಾಗಿಲು ಉಪ್ಪುಂದದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ .ನಿ ಬೈಂದೂರು ಇದರ ನೂತನ 7ನೇ ಉಪ್ಪುಂದ ಶಾಖೆಯನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ ಶ್ರೀರಾಮ ಸೌಹಾರ್ಧ ಸಂಸ್ಥೆ ವಾಣಿಜ್ಯ ಬ್ಯಾಂಕುಗಳಿಗೆ ಸರಿಸಾಟಿಯಾದ ಸೇವೆ ನೀಡುತ್ತಿದೆ ಸಂಸ್ಥೆಯ ಉತ್ಕ್ರಷ್ಟತೆ ಮತ್ತು ಅತ್ಯುತ್ತಮ ಸೇವೆ ಪ್ರಗತಿಯ ಸಂಕೇತವಾಗಿದೆ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಠೇವಣಿ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಅವರು ಸಹಕಾರಿ ಕ್ಷೇತ್ರದಲ್ಲಿ ರಾಜು ಪೂಜಾರಿಯವರು  ಹಿರಿಯ ಮುಂದಾಳು ಆಗಿದ್ದು ಶ್ರೀರಾಮ ಸೌಹಾರ್ಧ ಸಂಸ್ಥೆಯ ಗುಣಮಟ್ಟದ ಸೇವೆ ಮೂಲಕ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ ಶೆಟ್ಟಿ ಬೆಳಪು,ಎಮ್.ಮಹೇಶ ಹೆಗ್ಡೆ,ಜೆ. ಡಿ. ನಾಯ್ಕ್ ಭಟ್ಕಳ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಭಿವೃದ್ಧಿ ಅಧಿಕಾರಿ ವಿಜಯ್, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಹಿರಿಯರಾದ ಸೂಲಿಯಣ್ಣ ಶೆಟ್ಟಿ, ರೆ. ಫಾ. ಫಿಲಿಪ್ ನೆಲ್ಲಿವಿಳಾ,ಉದ್ಯಮಿ ಮೋಹನ ಪೂಜಾರಿ ಉಪ್ಪುಂದ,ಉದ್ಯಮಿ ಜಿ.ಗೋಕುಲ ಶೆಟ್ಟಿ,ಮಾಜಿ ಜಿ.ಪಂ ಸದಸ್ಯ ಮದನ್ ಕುಮಾರ್ ಉಪ್ಪುಂದ,ಪ್ರದೀಪ ಯಡಿಯಾಳ್,ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ,ಮರವಂತೆ ಬಡಾಕೆರೆ ವ್ಯ.ಸೇ.ಸಂಘದ ಅಧ್ಯಕ್ಷ ಜಗದೀಶ ಪೂಜಾರಿ,ಶೀನ ಪೂಜಾರಿ,ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ,ಪ್ರಭಾಕರ ಶೆಟ್ಟಿ,ರಾಜೀವ ಪಡುಕೋಣೆ,ಚಂದ್ರಶೇಖರ ಅಡಿಗ,ಅರವಿಂದ ಪೂಜಾರಿ ನಾಡ,ಉದ್ಯಾವರ ಮಂಜುನಾಥೇಶ್ವರ ಆರ್ಯುವೇದ ಆಸ್ಪತ್ರೆಯ ಅಧೀಕ್ಷಕ ಡಾ.ನಾಗರಾಜ ಪೂಜಾರಿ,ಸಂಸ್ಥೆಯ ಉಪಾಧ್ಯಕ್ಷ ಎಮ್.ವಿನಾಯಕ ರಾವ್,ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ ರೈ ಕೆ, ಹಿರಿಯ ಸಹಕಾರಿಗಳು,ನಿರ್ದೇಶಕರು ಹಾಗೂ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಸ್.ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.ಶಾಖಾ ವ್ಯವಸ್ಥಾಪಕ ರಾಘವೇಂದ್ರ ಪೂಜಾರಿ ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

 

 

 

 

 

 

 

 

 

Leave a Reply

Your email address will not be published. Required fields are marked *

18 + ten =