ಶಿರೂರು: ದೇವಸ್ಥಾನ,ದೈವಸ್ಥಾನಗಳು ನಮ್ಮ ಬದುಕಿಗೆ ದಾರಿದೀವಿಗೆ. ಧಾರ್ಮಿಕ ಭಾವನೆ ಎಲ್ಲರಲ್ಲೂ ಜಾಗೃತವಾಗಬೇಕು.ಆತ್ಮವಿಶ್ವಾಸ ಗಟ್ಟಿಯಾಗಲು ದೈವ – ದೇವರ ಉಪಾಸನೆ ಅತೀ ಅಗತ್ಯ. ದೇಶ- ಧರ್ಮವನ್ನು ಉಳಿಸುವ ಜೊತೆಗೆ ನಮ್ಮ ಅಸ್ಥಿತ್ವವನ್ನು ಉಳಿಸುವ ಕೆಲಸವಾಗಬೇಕು. ತ್ಯಾಗಮಯ ಜೀವನ ನಮ್ಮದಾಗಬೇಕು. ದೇವರನ್ನು ನಂಬಿಕೆಯಿಂದ ನಂಬಬೇಕು.ಅಳ್ವೆಗದ್ದೆ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಇಂತಹ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಸರ್ವರಿಗೂ ಭಗವಂತ ಒಳಿತು ಮಾಡಲಿ ಎಂದು ಶ್ರೀಮದ್ ಜಗದ್ಗುರು ಆದಿ ಶಂಕರಾಚಾರ್ಯ ಮಹಾ ಸಂಸ್ಥಾನಂ ಶ್ರೀಮದ್ ಎಡನೀರು ಮಠ ಕಾಸರಗೋಡು ಸ್ವಾಮೀಜಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು ಅವರು ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಪುನರ್ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸೋಮವಾರ ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣಪತಿ ಎಸ್. ಮೊಗವೀರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ ಎನ್.ಅಳ್ವೆಗದ್ದೆ,ವತ್ತಿನೆಣೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಜಿ.ಶಂಕರ್ ಸಹೋದರ ಜಯಣ್ಣ,ದೇವಸ್ಥಾನದ ಗೌರವಾಧ್ಯಕ್ಷ ನಾರಾಯಣ ಟಿ.ಅಳ್ವೆಗದ್ದೆ,ದೇವಸ್ಥಾನದ ಮಾಜಿ ಅಧ್ಯಕ್ಷ ಅಕ್ಷಯ ನಾರಾಯಣ ಮಾಸ್ತಿ,ಸುಬ್ರಾಯ ಆರ್.ಮೊಗೇರ್,ಜ್ಞಾನದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಶಿರೂರಕರ್,ಧ.ಗ್ರಾ.ಯೋ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ,ಮತ್ಸೋಧ್ಯಮಿ ಗೋಪಾಲ ಮೊಗೇರ್ ಭಟ್ಕಳ,ಗ್ರಾ.ಪಂ ಮಾಜಿ ಸದಸ್ಯ ನಾಗೇಶ ಟಿ.ಅಳ್ವೆಗದ್ದೆ,ಉದ್ಯಮಿ ಪ್ರಶಾಂತ ವಿ.ಮೊಗೇರ್,ದೇವಸ್ಥಾನದ ಮಾಜಿ ಅಧ್ಯಕ್ಷ ತಿಮ್ಮಪ್ಪ ಎನ್.ಮೊಗೇರ್,ತಾ.ಪಂ ಮಾಜಿ ಅಧ್ಯಕ್ಷೆ ಶ್ಯಾಮಲಾ ಎಸ್.ಕುಂದರ್,ಉದ್ಯಮಿ ನರೇಶ್ ಮೊಗೇರ್,ಕರ್ನಾಟಕ ಬ್ಯಾಂಕಿನ ಅಧಿಕಾರಿ ರಮೇಶ ವೈದ್ಯ,ಹೆಮ್ಮಾಡಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಉಪಸ್ಥಿತರಿದ್ದರು.









ಈ ಸಂದರ್ಭದಲ್ಲಿ ಶಿರೂರಿನ ಹಿರಿಯ ವೈದ್ಯರಾದ ಡಾ.ಕೆ.ಪಿ ನಂಬಿಯಾರ್ ಹಾಗೂ ಡಾ.ಕಮಲಾಕರ್ ಅಚ್ಚುತ ಪಂಡಿತ್ ರವರನ್ನು ದೇವಸ್ಥಾನದ ವತಿಯಿಂದ ಸಮ್ಮಾನಿಸಲಾಯಿತು ಹಾಗೂ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಧನ ಸಹಾಯ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.




ನಿಟ್ಟೆ ಕಾಲೇಜಿನ ಪ್ರಾಧ್ಯಾಪಕ ಪ್ರೋ.ರಾಧಾಕೃಷ್ಣ ದೊಡ್ಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಲೋಕೇಶ್ ಮೊಗೇರ್ ಸ್ವಾಗತಿಸಿದರು.ದೀಪಿಕಾ ರವಿ ಕೋಟ ಕಾರ್ಯಕ್ರಮ ನಿರೂಪಿಸಿದರು.ವಿನೋದ ಮೊಗೇರ್ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಕೃಷ್ಣ ಸ್ಮಾರ್ಟ್ ಸ್ಟುಡಿಯೋ ಶಿರೂರು