ಶಿರೂರು: ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಎ.11 ರಿಂದ 14 ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು ನೂತನವಾಗಿ ನಿರ್ಮಾಣಗೊಂಡಿರುವ. ಶ್ರೀಮತಿ ಶಾಲಿನಿ ಡಾ ಜಿ ಶಂಕರ್ ಸಭಾ ವೇದಿಕೆಯನ್ನು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನ ಮಧೂರು ಪ್ರಧಾನ ಅರ್ಚಕರಾದ ಡಾ.ಪಿ.ಕೆ ಧನಂಜಯ ಭಟ್ ಲೋಕಾರ್ಪಣೆಗೊಳಿಸಿದರು.

ಜಿಲ್ಲಾ ರಾಜ್ಯೋತ್ಸವ ಹಾಗೂ ಹನುಮಗಿರಿ ಯಕ್ಷಗಾನ ಮೇಳದ ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಗವಂತನ ಅನುಗ್ರಹ ಇದ್ದಾಗ ಮಾತ್ರ ಜಗತ್ತು ಸುಖ,ಶಾಂತಿ,ಸಮೃದ್ದಿ ಮತ್ತು ಬದುಕು ಸಾರ್ಥಕತೆ ಪಡೆಯುತ್ತದೆ.ಭಕ್ತಿ ಭಗವಂತನ ಸಾಕ್ಷಾತ್ಕಾರ ದೊರಕಿಸುತ್ತದೆ.ದೇವಸ್ಥಾನದ ಜೀರ್ಣೋದ್ದಾರ ಊರಿನ ಅಭಿವೃದ್ದಿಯ ಜೊತಗೆ ಪರಸ್ಪರ ಪ್ರೀತಿ ವಿಶ್ವಾಸದ ಸಂಘಟನೆ ಮೂಡಿಸುತ್ತದೆ.ನೂತನ ವೇದಿಕೆ ಊರಿನ ಕಲಾ ಪ್ರತಿಭೆಗಳಿಗೆ ಪ್ರೇರಣೆಯಾಗಲಿ ಎಂದರು.

ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ರಾಮ ಕೆ.ದೊಡ್ಮನೆ ಮಾತನಾಡಿ ಗ್ರಾಮೀಣ ಭಾಗವಾದ ಅಳ್ವೆಗದ್ದೆಯಲ್ಲಿ ಊರಿನ ಜನರು ಒಗ್ಗಟ್ಟಿನಿಂದ ಇಂತಹ ದೊಡ್ಡ ಧಾರ್ಮಿಕ ಸಂಭ್ರಮದಲ್ಲಿ ತೊಡಗಿಸಿಕೊಂಡೊರುವುದು ಮತ್ತು ನಾಲ್ಕು  ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನ ಪ್ರೀತಿ ಪಾತ್ರರಾಗುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ದಕ್ಷಿಣ ಆಪ್ರಿಕಾ ಪ್ರಶಾಂತ ವಿ.ಮೊಗೇರ್ ಅಳ್ವೆಗದ್ದೆ,ಕೋಟೆಮನೆ ದುರ್ಗಾಂಬಿಕಾ ದೇವಸ್ಥಾನದ ಅಧ್ಯಕ್ಷ ನಾರಾಯಣ ವಿ.ಮೇಸ್ತ,ಸಂಕದಗುಂಡಿ ಸಂಕಮ್ಮ ಮಾಸ್ತಿ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಪೂಜಾರಿ, ಶ್ರೀ ಮಹಾಸತಿ ಯುವಕ ಸಂಘ ಮುದ್ರಮಕ್ಕಿ ಅಧ್ಯಕ್ಷ ರಾಘವೇಂದ್ರ ಶಿರೂರು,ಮಾರ್ಕೆಟ್ ಸಪರಿವಾರ ಶ್ರೀ ಮಹಾಸತಿ ದೈವಸ್ಥಾನದ ಅಧ್ಯಕ್ಷ ರಘುವೀರ ಶೇಟ್,ಉಪ್ಪರಿಗೆಹಿತ್ಲು ಜಟ್ಟಿಗೇಶ್ವರ ದೈವಸ್ಥಾನದ ಅಧ್ಯಕ್ಷ ವೆಂಕಟೇಶ ವಿ.ಮೇಸ್ತ,ಕಡ್ಕೆ ಬೀರೇಶ್ವರ ದೈವಸ್ಥಾನದ ಅಧ್ಯಕ್ಷ ನಾಗಯ್ಯ ಜಾನ್ಮನೆ,ಮತ್ಸೋಧ್ಯಮಿ ನಾರಾಯಣ ಖಾರ್ವಿ ಮುರುಡೇಶ್ವರ,ಮುರ್ಡೇಶ್ವರ ಗ್ರಾಮೀಣ ವ್ಯವಸಾಯ ಸಂಘದ ಅಧ್ಯಕ್ಷ ಭಾಸ್ಕರ ಜಿ.ಮೊಗೇರ್,ಭಟ್ಕಳ ಟ್ರಾಲ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ಹನುಮಂತ ಮೊಗೇರ್,ಭಟ್ಕಳ ಮೊಗೇರ್ ಸಮಾಜದ ಅಧ್ಯಕ್ಷ ಮಂಜುನಾಥ ಎಸ್.ಮೊಗೇರ್,ಕಿರುಹೊಳೆ ಮಹಾಸತಿ ದೇವಸ್ಥಾನದ ಅಧ್ಯಕ್ಷ ಸುಭಾಷ್ ಕಾಮತ್,ಕರಾವಳಿ ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ ಬಿಲ್ಲವ,ಗ್ರಾ.ಪಂ ಮಾಜಿ ಸದಸ್ಯ ದೇವಕಿ ಎನ್.ಗದ್ದೆಮನೆ, ರಾಮ ಎನ್.ಅಳ್ವೆಗದ್ದೆ ಅಧ್ಯಕ್ಷರು ಜೀರ್ಣೋದ್ದಾರ ಸಮಿತಿ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ,ಗಣಪತಿ ಎಸ್.ಮೊಗವೀರ ಅಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ, ಶ್ರೀಪಾದ ಕುಮಾರ್ ಅಧ್ಯಕ್ಷರು ಶ್ರೀ ಬೊಬ್ಬರ್ಯ ದೈವಸ್ಥಾನ ಅಳ್ವೆಗದ್ದೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಗೋವಿಂದ ನಾಗಪ್ಪ ಮೊಗೇರ್,ಗಣಪತಿ ಕೆ.ಮೊಗೇರ್ ಹಾಗೂ ಮಂಜಪ್ಪ ಮೊಗೇರ್ ರವರನ್ನು ಸಮ್ಮಾನಿಸಲಾಯಿತು.

ಶ್ರೀಧರ ಅವಭೃತ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಕುಮಾರ್ ಮೊಗೇರ್ ಗದ್ದೆಮನೆ ಸ್ವಾಗತಿಸಿದರು.ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.ಲೋಕೇಶ್ ಮೊಗೇರ್ ವಂದಿಸಿದರು.

ವರದಿ/ಚಿತ್ರ; ಗಿರೀಶ್ ಶಿರೂರು

 

Leave a Reply

Your email address will not be published. Required fields are marked *

19 − 9 =