ಶಿರೂರು: ಪಿಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ತಾಲೂಕು ಪಂಚಾಯತ್ ಬೈಂದೂರು ಇದರ 2025 -26 ನೇ ಸಾಲಿನ ಅನುದಾನದ ಯೋಜನೆಯಡಿ ಬಿಸಿ ಊಟದ ವಿಶೇಷ ವ್ಯವಸ್ಥೆಯಲ್ಲಿ ಬಾಯ್ಲರ್ ಹಾಗೂ ಸ್ಟೀಮರ್ಕಾಮನ್ನು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪುಷ್ಪರಾಜ ಶೆಟ್ಟಿ ಲೋಕಾರ್ಪಣೆಗೊಳಿಸಿದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ನಾಗರತ್ನ ಆಚಾರ್ಯ,ಎಸ್ ಡಿ ಸಿ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಕಾರಿಕಟ್ಟೆ,ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ದೇವಿ,ನಿಟ್ಟೆ ಎಕ್ಸ್ಪರಿಮೆಂಟ್ ಲ್ಯಾಬಿನ ಆದರ್ಶ್ ದೇವಾಡಿಗ ಜ್ಞಾನೇಶ್ ಮಲ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಉತ್ತಮ ಎಸ್ ಡಿ ಎಂ ಸಿ ಪ್ರಶಸ್ತಿ ಅನುದಾನದಡಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು ಹಾಗೂ ಈ ವರ್ಷದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರ ಶಾಲೆಗೆ ರಾಜ್ಯದಿಂದ ಕೊಡ ಮಾಡಲ್ಪಟ್ಟ ಅನುದಾನದಿಂದ ನಿಟ್ಟೆ ಇಂಜಿನಿಯರ್ ಕಾಲೇಜಿನ ಎಕ್ಸ್ಪರಿಮೆಂಟ್ ಲ್ಯಾಬ್ ನ ಪ್ರೊಫೆಸರ್ ಅಕ್ಷಯ್ ನೇತೃತ್ವದಲ್ಲಿ  ಸಂಶೋಧಿಸಿರುವ ಶಿಕ್ಷ ರೋಬೋಟ ಅನಾವರಣಗೊಳಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.

ಸಮೂಹ ಸಂಪನ್ಮೂಲ ವ್ಯಕ್ತಿ ಗಣೇಶ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮುಖ್ಯ ಶಿಕ್ಷಕ ಶಂಕರ್ ಶಿರೂರು ಸ್ವಾಗತಿಸಿದರು. ಶಿಕ್ಷಕ ಸಿ.ಎನ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ  ಗೋವಿಂದ ಎಂ.ಹೊಸೂರು ವಂದಿಸಿದರು.

Leave a Reply

Your email address will not be published. Required fields are marked *

one × 1 =