ಶಿರೂರು: ಶಿರೂರಿನ ಪ್ರಸಿದ್ದ ಐತಿಹಾಸಿಕ ಹಿನ್ನೆಲೆಯ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಎಪ್ರಿಲ್ 02 ರಿಂದ ಎಪ್ರಿಲ್ 14 ರ ವರೆಗೆ ನಡೆಯಲಿರುವ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮೂಹೂರ್ತ ಕಾರ್ಯಕ್ರಮ ಗುರುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ನಡೆಯಿತು.

ಬೆಳಿಗ್ಗೆ ವೇದಮೂರ್ತಿ ಶ್ರೀ ರಾಮಚಂದ್ರ ಪರಂಭಟ್ಟ ಶಿರಾಲಿ ತಂತ್ರಿವರ್ಯರ ನೇತ್ರತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ  ರಾಮ ಎನ್.ಅಳ್ವೆಗದ್ದೆ ಅಧ್ಯಕ್ಷರು ಜೀರ್ಣೋದ್ದಾರ ಸಮಿತಿ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ,ಗಣಪತಿ ಎಸ್.ಮೊಗವೀರ ಅಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ,ಶ್ರೀಪಾದ ಕುಮಾರ್ ಅಧ್ಯಕ್ಷರು ಶ್ರೀ ಬೊಬ್ಬರ್ಯ ದೈವಸ್ಥಾನ ಅಳ್ವೆಗದ್ದೆ,ಊರಿನ ಹಿರಿಯರಾದ ನಾರಾಯಣ ಟಿ.ಅಳ್ವೆಗದ್ದೆ ,ಸಮಿತಿಯ ಸರ್ವ ಸದಸ್ಯರು,ಮಹಿಳಾ ಮಂಡಳಿಯ ಸದಸ್ಯರು ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.

News/pic: Giri Shiruru

 

 

Leave a Reply

Your email address will not be published. Required fields are marked *

2 × four =