ಶಿರೂರು: ಶಿರೂರಿನ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಭಾರತೀಯ ಜನತಾ ಪಕ್ಷದ ಯುವ ಮುಂದಾಳು ದಿನೇಶ್ ಕುಮಾರ್ ಶಿರೂರು (46) ಸೋಮವಾರ ಅಕಾಲಿಕ ನಿಧನ ಹೊಂದಿದ್ದಾರೆ.ಶಿರೂರು ಗ್ರಾಮ ಪಂಚಾಯತ್‌ನ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಇವರು ಆಕ್ರಮ -ಸಕ್ರಮ ಸಮಿತಿ ಮಾಜಿ ಸದಸ್ಯರಾಗಿ,ಸ.ಪ.ಪೂ ಕಾಲೇಜಿನ ಶಾಲಾಭಿವೃದ್ದಿ ಸಮಿತಿ ಮಾಜಿ ಸದಸ್ಯರಾಗಿ, ಮೇಲ್ಪಂಕ್ತಿ ಎರಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ,ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರೀಯ ಸದಸ್ಯರಾಗಿ ಹಾಗೂ  ವಿವಿಧ ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ಸ್ನೇಹಮಯ ವ್ಯಕ್ತಿತ್ವದ ಇವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲಾ ಆಸ್ಪತ್ರೆಗೆ ದಾಖಲಾಗಿದ್ದು ಸೋಮವಾರ  ನಿಧನರಾಗಿದ್ದಾರೆ. ಅವಿವಾಹಿತರಾಗಿರುವ ಇವರು ತಾಯಿ ಹಾಗೂ ಎರಡು ಸಹೋದರಿ ಹಾಗೂ ಅಪಾರ ಸ್ನೇಹಿತ ವರ್ಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

three × one =