ಬೈಂದೂರು: ಆರಕ್ಷಕ ಠಾಣೆ ಬೈಂದೂರು ಇದರ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಭೆ ಠಾಣೆಯ ಆವರಣದಲ್ಲಿ ನಡೆಯಿತು. ಬೈಂದೂರು ಠಾಣೆಯ ವೃತ್ತ ನಿರೀಕ್ಷಕ ಶಿವಕುಮಾರ್ ಬಿ ರವರ ನೇತೃತ್ವದಲ್ಲಿ ಮಾಸಿಕ SC/ST ಸಭೆ ನಡೆಸಿ ಸಭೆಯಲ್ಲಿ ಕುಂದುಕೊರತೆ ಬಗ್ಗೆ ವಿಚಾರಿಸಿ ಆಹ್ವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ವ್ಯವಹಾರ ಮಾಡುವುದಾಗಿ ತಿಳಿಸಿ.ಸೈಬರ್ ಅಪರಾಧ, ಸಂಚಾರಿ ನಿಯಮಗಳ ಕುರಿತು,ತುರ್ತು ಸಂದರ್ಭದಲ್ಲಿ 112 ದೂರವಾಣಿ ಕುರಿತು ಹಾಗೂ ಇನ್ನೀತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಠಾಣಾಧಿಕಾರಿ ಸುನೀಲ್ ಕುಮಾರ್,ಕ್ರೈಂ ಎಸ್.ಐ ನವೀನ್ ಬೋರ್ಕರ್ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಹಾಜರಿದ್ದರು.