ಬೈಂದೂರು: ಇಲ್ಲಿನ ಐತಿಹಾಸಿಕ ಪ್ರಸಿದ್ದ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬ ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ನಡೆಯಿತು. ಕರ್ನಾಟಕ ಪ್ರಾಂತೀಯ ಸೆಮಿನರಿಯ ನಿರ್ದೇಶಕ ರೆ. ಫಾ. ಬೊನಿಪಾಸ್ ಪಿಂಟೊ ಬಲಿಪೂಜೆಯ ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೇವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು.ಕೋಂಪ್ರಿ ಹಬ್ಬವನ್ನು ಉಡುಪಿಯ ರೆ. ಫಾ. ಜೋಕಿಂ ಡಿ.ಸೋಜಾರವರು ನೆರವೆರಸಿದರು.
ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳು, ಬೈಂದೂರಿನ ಸಹಾಯಕ ಧರ್ಮಗುರು ಪ್ರಥ್ವಿ ರೋಡ್ರಿಗಸ್,ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಸ್ಟೇಪನ್ ಡಾಯಸ್, ಕಾರ್ಯದರ್ಶಿ ವೀಣಾ ಫೆನಾಂಡಿಸ್, ಆಯೋಗದ ಸಂಯೋಜಕಿ ಜೋಸ್ಪಿನ್ ರೊಡ್ರಿಗಸ್ ಉಪಸ್ಥಿತರಿದ್ದರು.
ಫೆಬ್ರವರಿ 15 ರಂದು ಭಾನುವಾರ ಸಂಜೆ 5ಕ್ಕೆ ಇತಿಹಾಸ ಪ್ರಸಿದ್ಧ ಇಗರ್ಜಿಗುಡ್ಡೆಯ ಮೇಲೆ ಗುಡ್ಡೆ ಫೆಸ್ತ್ ನಡೆಯಲಿದೆ.