ಬೈಂದೂರು: ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸುವಲ್ಲಿ ಸಂಘ-ಸಂಸ್ಥೆಗಳ ಪಾತ್ರ ಅತೀ ಮಹತ್ವದಾಗಿದ್ದು, ಸಮಾಜಮುಖಿ ಚಿಂತನೆಯೊಂದಿಗೆ ಹುಟ್ಟಿಕೊಂಡ ಜೇಸಿ ಸಂಸ್ಥೆ ವ್ಯಕ್ತಿತ್ವವನ್ನು ಬೆಳೆಸುವುದರ ಮೂಲಕ ಸಮಾಜದ ಪರಿವರ್ತನೆಗೆ ಸಹಕಾರಿಯಾಗಿದೆ ಎಂದು ಡಿಎಸ್‌ಎಸ್ ಜಿಲ್ಲಾ ಮುಖ್ಯ ಸಂಚಾಲಕ ಮಂಜುನಾಥ ಗಿಳಿಯಾರ್ ಹೇಳಿದರು ಅವರು ಯಡ್ತರೆ ಜೆಎನ್‌ಆರ್ ಸಭಾಭವನದಲ್ಲಿ ನಡೆದ ಜೆಸಿಐ ಬೈಂದೂರು ಸಿಟಿ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿ ಸಂಘಟನೆ ಒಂದು ಶಕ್ತಿಯಾಗಿದ್ದು, ಅದು ತನ್ನ ಕ್ರೀಯಾಶೀಲತೆಂದಾಗಿ ಇನ್ನಷ್ಟು ಬಲಿಷ್ಠವಾಗುತ್ತದೆ. ಯುವಕರು ದೇಶದ ಅಮೂಲ್ಯ ಸಂಪತ್ತು, ಸುಸಂಸ್ಕೃತ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಯುವ ಜನತೆ ಮನಸು ಮಾಡಬೇಕು. ಸೇವೆಯೇ ಎಲ್ಲರ ಪ್ರಮುಖ ಅಜೆಂಡವಾಗಬೇಕು. ಎಲ್ಲರೂ ಪರಸ್ಪರ ಸಂತೋಷ ಹಂಚಿಕೊಂಡು ಕುಟುಂಬದ ರೀತಿಯಲ್ಲಿ ಜೀವನ ಸಾಗಿಸುವಂತಾಗಬೇಕು ಎಂದರು.

ಈ ಸಾಲಿನ ನೂತನ ಅಧ್ಯಕ್ಷೆ ಚೈತ್ರಾ ಸತೀಶ್ ಇವರಿಗೆ ನಿರ್ಗಮನ ಅಧ್ಯಕ್ಷ ರಾಜು ಕೆ. ಮೊಗವೀರ ಅಧಿಕಾರ ಹಸ್ತಾಂತರಿಸಿದರು. ಪೂರ್ವಾಧ್ಯಕ್ಷೆ ಅನಿತಾ ಆರ್. ಕೆ. ಇವರಿಗೆ ಕಮಲಪತ್ರ ಪ್ರಶಸ್ತಿ ಪ್ರದಾನಿಸಲಾಯಿತು. ಸಂಸ್ಥೆಗೆ ಎಂಟು ನೂತನ ಸದಸ್ಯರು ಸೇರ್ಪಡೆಗೊಂಡರು. ಅರಣ್ಯ ವಲಯಾಧಿಕಾರಿ ಜ್ಯೋತಿ ಸಂದೇಶ್, ಜೆಸಿಐ ವಲಯ ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ಲೇಡಿ ಜೇಸಿ ಸಂಯೋಜಕಿ ಸೂರ್ಯಕಾಂತಿ, ಜೆಜೆಸಿ ಅಧ್ಯಕ್ಷೆ ಮಾನಸ ಇದ್ದರು. ನೂತನ ಕಾರ್ಯದರ್ಶಿ ಪ್ರೇಮಾ ವಿ. ಶೆಟ್ಟಿ ವಂದಿಸಿದರು.