ಶಿರೂರು: ಲಬೈಕ್ ಕ್ರಿಕೆಟರ್‍ಸ್ ಶಿರೂರು ಇವರ ಆಯೋಜಕತ್ವದಲ್ಲಿ ನಡೆದ ಶಿರೂರು ಟ್ರೋಫಿ -2026 ಕ್ರಿಕೆಟ್ ಪಂದ್ಯಾಟದಲ್ಲಿ ಶಿರೂರಿನ ಬಲಿಷ್ಟ ತಂಡವಾದ ಸನ್ನಿ ಕ್ರಿಕೆಟರ್‍ಸ್ ಶಿರೂರು ತಂಡ ಚಾಂಪಿಯನ್ ಆಗಿ ಸಮಗ್ರ ಪ್ರಶಸ್ತಿ ಪಡೆದರು ಹಾಗೂ ನಾಗಬ್ರಹ್ಮ ಕ್ರಿಕೆಟರ್‍ಸ್ ದೊಂಬೆ ರನ್ನರ್ ಆಫ್ ಪ್ರಶಸ್ತಿ ಪಡೆದರು.
ಸನ್ನಿ ತಂಡದ ಆಟಗಾರ ಕಿರಣ್ ಮಹಾದೇವ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ತಂಡದಲ್ಲಿ ಮಾಲಕರಾದ ವಿಶ್ವನಾಥ ಪೂಜಾರಿ ಶಿರೂರು,ವಿನಯ, ತಂಡದ ನಾಯಕ ಹರೀಶ್,ರಾಘು ಶಿರೂರು, ಕಿರಣ್ ಮುದ್ರಮಕ್ಕಿ , ನಾಗೇಶ್ , ಗಿರೀಶ್, ಸಂತೋಷ್, ಅಶೋಕ್, ದಿನ್ನಾ, ಪ್ರವೀಣ್ , ನಾಗರಾಜ್, ಸುಮಂತ್, ಪ್ರಜ್ವಲ್ , ಮಣಿ, ವೆಂಕಟೇಶ್ , ರಾಜು, ಮುಸ್ತಕೀಮ್, ರಾಸಿಕ್ ತಂಡದಲ್ಲಿದ್ದರು.
