ಬೈಂದೂರು: ಇಲ್ಲಿನ ಐತಿಹಾಸಿಕ ಪ್ರಸಿದ್ದ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬ ಫೆ.೧೦ ಹಾಗೂ ೧೧ ರಂದು ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ನಡೆಯಲಿದೆ. ಹಬ್ಬದ ಪೂರ್ವಭಾವಿಯಾಗಿ ಫೆಬ್ರವರಿ 10 ರಂದು ಮಂಗಳವಾರ ಸಂಜೆ 7 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳು ಜರುಗಲಿರುವುದು. ಫೆ.11 ರಂದು ಬೆಳಿಗ್ಗೆ 10.15 ಕ್ಕೆ ಚರ್ಚಿನ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ವಾರ್ಷಿಕ ತೆರಾಲಿ ಹಬ್ಬದ ಪ್ರಯುಕ್ತ ಬಲಿ ಪೂಜೆ ನೆರವೇರಲಿದೆ. ಫೆಬ್ರವರಿ 15 ರಂದು ಭಾನುವಾರ ಸಂಜೆ ೫ಕ್ಕೆ ಇತಿಹಾಸ ಪ್ರಸಿದ್ಧ ಇಗರ್ಜಿಗುಡ್ಡೆಯ ಮೇಲೆ ಗುಡ್ಡೆ ಫೆಸ್ತ್ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.