ಬೈಂದೂರು,ಫೆ.10: ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಬೈಂದೂರು ಹಾಗೂ ವಂಡ್ಸೆ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಕಾಂಗ್ರೆಸ್‌ ಮುಖಂಡ ರಾಜು ದೇವಾಡಿಗರವರ ಶ್ರದ್ದಾಂಜಲಿ ಸಭೆ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ನಡೆಯಿತು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ರಾಜು ದೇವಾಡಿಗರವರು ಬೈಂದೂರು ಕ್ಷೇತ್ರದ ಹಿರಿಯ ರಾಜಕೀಯ ಮುಂದಾಳುವಾಗಿ ಜಿ.ಪಂ ಸದಸ್ಯರು ಸೇರಿದಂತೆ ದೊರೆತ ಅವಕಾಶದಲ್ಲಿ ಸದಾ ಜನರ ಸೇವೆ ಮೂಲಕ ಜನಾನುರಾಗಿಯಾಗಿದ್ದರು.ಅವರ ಅಕಾಲಿಕ ನಿಧನ ಅಘಾತ ನೀಡಿದೆ.ಕಾಂಗ್ರೆಸ್‌ ಪಕ್ಷದ ಬೆಳವಣಿಗೆಯಲ್ಲಿ ರಾಜು ದೇವಾಡಿಗರವರ ಕೊಡುಗೆ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಎಸ್‌.ಪ್ರಕಾಶ್ಚಂದ್ರ ಶೆಟ್ಟಿ,ಎಸ್‌.ರಾಜು ಪೂಜಾರಿ ಸಂಪಗೇಡಿ ಸಂಜೀವ ಶೆಟ್ಟಿ,ಅರವಿಂದ ಪೂಜಾರಿ,ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಪ್ರವೀಣ್‌ ಕುಮಾರ್‌ ಶೆಟ್ಟಿ,ಮದನ್‌ ಕುಮಾರ್‌, ಪ್ರಸನ್ನ ಕುಮಾರ್‌ ಶೆಟ್ಟಿ,ರಘುರಾಮ ದೇವಾಡಿಗ,ತಮ್ಮಯ್ಯ ದೇವಾಡಿಗ,ಕದಂ ದುಬೈನ ಶೀನ ದೇವಾಡಿಗ ತ್ರಾಸಿ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

1 + 1 =