ಬೈಂದೂರು; ಜೆಸಿಐ ವಲಯ 15ರ ವಲಯ ಆಡಳಿತ ಮಂಡಳಿಗೆ ಜೆಸಿಐ ಉಪ್ಪುಂದ ಸುಪ್ರೀಂ ಘಟಕದ 2025ನೇ ಸಾಲಿನ ಅಧ್ಯಕ್ಷೆ ಜ್ಯೋತಿ ಜಯರಾಮ್ ಶೆಟ್ಟಿ ಇವರಿಗೆ 2026ನೇ ವಲಯ ಆಡಳಿತ ಮಂಡಳಿಗೆ ಸ್ಕಾಲರ್‌ಶಿಪ್ ಸಂಯೋಜಕರಾಗಿ ನೇಮಕಗೊಂಡಿದ್ದಾರೆ. ವಿಟ್ಲ ಶತಮಾನೋತ್ಸವ ಸ್ಮಾರಕ ಸಭಾಭವನದಲ್ಲಿ ಜೆಸಿಐ ಇಂಡಿಯಾ ವಲಯ 15ರ ನೂತನ ವಲಯ ಆಡಳಿತ ಮಂಡಳಿಯ ಪದಪ್ರದಾನ ಸಮಾರಂಭದಲ್ಲಿ ನೂತನ ವಲಯ ಅಧ್ಯಕ್ಷ ಸಂತೋಷ್ ಶೆಟ್ಟಿ ಇವರು ಜ್ಯೋತಿ ಜಯರಾಮ್ ಶೆಟ್ಟಿ ಇವರಿಗೆ ಅಧಿಕೃತ ನೇಮಕಾತಿ ಪತ್ರ ಹತ್ತಾಂತರಿಸಿ ಪ್ರಮಾಣವಚನ ಬೋಧಿಸಿದರು.