ಶಿರೂರು: ಜೆಸಿಐ ಸಂಸ್ಥೆ ಉತ್ತಮ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಬದಲಾವಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ.ಗ್ರಾಮೀಣ ಭಾಗದಲ್ಲಿ ಜೆಸಿಐ ಸಂಸ್ಥೆಯ ಕಾರ್ಯಗಳು ಶ್ಲಾಘನೀಯ.ಅಸಂಖ್ಯಾತ ಯುವ ನಾಯಕರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿದೆ.ವ್ಯಕ್ತಿತ್ವ ವಿಕಸನ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಜೆ.ಸಿ.ಐ ಸಂಸ್ಥೆ ಇತರರಿಗೆ ಮಾದರಿಯಾಗಿದೆ.ಯುವಕರಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಮಾನವೀಯತೆಯ ಮೌಲ್ಯ ರೂಪಿಸಿ ಸಮಾಜದಲ್ಲಿ ನಿಸ್ವಾರ್ಥ ಸೇವೆಗೈಯುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹೆಚ್.ಹರಿಪ್ರಸಾದ್ ಶೆಟ್ಟಿ ಹೇಳಿದರು ಅವರು ಜೆಸಿಐ ಶಿರೂರು ರೂರಲ್ ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಶಿರೂರು ಬಪ್ಪನಬೈಲು ಶಾಲಾ ಆವರಣದಲ್ಲಿ ನಡೆದ ಭಾವಯಾನ -2025 ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಶಿರೂರು ಜೆಸಿಐ ಅಧ್ಯಕ್ಷ ಜಯಂತ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ರಘುರಾಮ ಕೆ.ಪೂಜಾರಿ,ಸ್ಥಾಪಕಾಧ್ಯಕ್ಷ ಮೋಹನ್ ರೇವಣ್ಕರ್,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಯಡ್ತರೆ ಗ್ರಾ.ಪಂ ಮಾಜಿ ಸದಸ್ಯ ಉದಯ ಮಾಕೋಡಿ,ಗ್ರಾ.ಪಂ ಸದಸ್ಯ ಮುಕ್ತಿ ಅಲ್ತಾಫ್,ಬಪ್ಪನಬೈಲು ಶಾಲಾ ಮುಖ್ಯ ಶಿಕ್ಷಕಿ ವಿನೋದಿನಿ ಕೆ.ಶೇರುಗಾರ್,ಜಟ್ಟಿಗೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಸುಬ್ರಾಯ ನಾಯ್ಕ,ಜಟ್ಟಿಗೇಶ್ವರ ಯುವಕ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ,ಶಾಲಾ ಎಸ್,ಡಿ.ಎಮ್.ಸಿ ಉಪಾಧ್ಯಕ್ಷ ಜನಾರ್ಧನ ಪೂಜಾರಿ,ಆಲಂದೂರು ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಸುರೇಶ ಎಸ್.ಪೂಜಾರಿ,ಜೇಸಿರೇಟ್ ಅಧ್ಯಕ್ಷೆ ಲತಾ ಪೂಜಾರಿ,ಜೂನಿಯರ್ ಜೇಸಿ ಅಧ್ಯಕ್ಷ ಪವನ್ ಕುಮಾರ್ ಹಾಗೂ ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಸಿ.ಎನ್.ಬಿಲ್ಲವ,ಜೇಸಿ ಕಮಲಪತ್ರ ಪ್ರಶಸ್ತಿ ಪುರಸ್ಕ್ರತ ಸತೀಶ ಕೊಠಾರಿ ಹಾಗೂ ಯುವಜೇಸಿ ಪ್ರಶಸ್ತಿ ಪಡೆದ ಜಯಂತ ಪೂಜಾರಿ ಯವರನ್ನು ಶಿರೂರು ಜೆಸಿಐ ವತಿಯಿಂದ ಸಮ್ಮಾನಿಸಲಾಯಿತು.
ನಿಕಟಪೂರ್ವಾಧ್ಯಕ್ಷ ಪ್ರಕಾಶ ಮಾಕೋಡಿ ಸ್ವಾಗತಿಸಿದರು.ಕಾರ್ಯದರ್ಶಿ ವಿನೋದ ಮೇಸ್ತ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ/ಸುರೇಶ್ ಮಾಕೋಡಿ ಲಕ್ಷ್ಮೀ ಸ್ಟುಡಿಯೋ ಶಿರೂರು