ಬೈಂದೂರು: ಅನಿವಾಸಿ ಕುಂದಗನ್ನಡಿಗರು ಗಲ್ಪ್ ರಾಷ್ಟ್ರಗಳಲ್ಲಿ ತಮ್ಮ ಭಾಷಿಗರನ್ನು ಒಗ್ಗೂಡಿಸುದರ ಜೊತೆಗೆ ಭಾಷೆಯ ಅಸ್ಥಿತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಹಲವಾರು ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಬರುತ್ತಿದ್ದು ಫ್ಯಾಮಿಲಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ಧೆಗಳು ನಡೆಯಿತು.
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಸ್ಥಾಪಕ ಅಧ್ಯಕ್ಷ ಸಾಧನ್‌ದಾಸ್ ಕಾರ್ಯಕ್ರಮ ಉಧ್ಘಾಟಿಸಿದರು.
ಉಪಾಧ್ಯಕ್ಷ ದಿನೇಶ್ ದೇವಾಡಿಗ, ಸುರೇಶ್ ಡಿ ಹೆಚ್ ಎಲ್, ಬಿ.ಎಂ ಗ್ರೂಫ್ ಚೇರ್ಮೇನ್ ಡಾ.ಕನಕರಾಜ್,ಪ್ರವೀಣ್ ಆಚಾರ್, ಸಮರ್ಥ್ ಶೆಟ್ಟಿ ,ಸುಜೀತ್ ಶೆಟ್ಟಿ ಕಾಳವಾರ,ಕಾರ್ಯದರ್ಶಿ ಸುಧಾಕರ ಪೂಜಾರಿ ಪಡುಕೋಣೆ , ಸದಸ್ಯರುಗಳಾದ ವಾಸು ಕುಮಾರ್ ಶೆಟ್ಟಿ , ಮಂಜುನಾಥ ದೇವಾಡಿಗ, ಸತೀಶ್ ಹಂಗಳೂರು , ಮನೋಜ್ ದೇವಾಡಿಗ, ಚಂದ್ರಶೇಖರ ಕೋಡಿ ಆಶಾ ಉಪಸ್ಥಿತರಿದ್ದರು.
ಸಂಘದ ಸದಸ್ಯ ವಿಘ್ನೇಶ್ ಕುಂದಾಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಐದು ತಂಡಗಳಾಗಿ ಮಾಡಲಾಗಿದ್ದು ಪ್ರತೀ ತಂಡಗಳಿಗೆ ಕುಂದಾಪುರದ ವಿಶೇಷತೆಗಳಲ್ಲಿ ಒಂದಾದ ಪಂಚಗಂಗಾವಳಿ ನದಿಗಳಾದ ಸೌರ್ಪಣಿಕ , ವರಾಹಿ , ಖೇಟಾ , ಕುಬ್ಜಾ ಮತ್ತು ಚಕ್ರಾ ಎಂದು ಕುಂದಾಪುರದಲ್ಲಿ ಸಂಗವಿಸುವ ಐದು ನದಿಗಳ ಹೆಸರು ನೀಡಲಾಯಿತು.