ಶಿರೂರು : ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ.ಮಕ್ಕಳನ್ನು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತ ಮಾಡದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ. ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡೆ ಅತೀ ಅವಶ್ಯ.ಶಾಲಾ ಹಂತದಲ್ಲೇ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ ಭವಿಷ್ಯ ಸಾಧ್ಯ ಕ್ರೀಡಾ ಆಸಕ್ತಿಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡಿದಂತಾಗುತ್ತದೆ.ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಪ್ರತಿಭೆಗಳಿಗೂ ಸಹ ಉತ್ತಮ ಅವಕಾಶವಿದೆ ಎಂದು ಬೈಂದೂರು ಆರಕ್ಷಕ ಠಾಣೆಯ ಗುಪ್ತದಳ ವಿಭಾಗದ ನವೀನ್ ಬೋರ್ಕರ್ ಹೇಳಿದರು ಅವರು ಗುರುವಾರ ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಇದರ 2025 ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಪಥ ಸಂಚಲನ ಕಾರ್ಯಕ್ರಮ ನೆರವೇರಿಸಿ ಈ ಮಾತುಗಳನ್ನಾಡಿದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಶಿರೂರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ವಿಜಯ ಗ್ರಾಮೀಣ ಪ್ರತಿಷ್ಠಾನ ಅಧ್ಯಕ್ಷ ವಿಶ್ವನಾಥ ಹೆಗ್ಡೆ, ಮಾಧವ ಬಿಲ್ಲವ,ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷ ಹರೀಶ್ ಕೆ,ತಾಯಂದಿರ ಸಮಿತಿ ಉಪಾಧ್ಯಕ್ಷೆ ಉಷಾ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು ಸ್ವಾಗತಿಸಿದರು.ಶಿಕ್ಷಕ ಸಿ.ಎನ್.ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ಗೋವಿಂದ ಎಂ.ಹೊಸೂರು ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಲಾರೆನ್ಸ್ ಫೆರ್ನಾಂಡೀಸ್